ವಿಜಯಪುರ, (ಫೆ. 23):  ಮೂಲ ಬಿಜೆಪಿಗರ ಅಸಮಾಧಾನದ ಮಧ್ಯೆ  ಸಿಎಂ ಬಿಎಸ್ ಯಡಿಯೂರಪ್ಪ ಏನ ಆಗುತ್ತಿಲ್ಲವೆಂಬಂತೆ ಸರ್ಕಾರವನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ಇದರ ನಡುವೆ ಬಿಜೆಪಿಯ 32 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ CM ಇಬ್ರಾಹಿಮ್, ಬಿಜೆಪಿಯ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದು ಒಂದು ವಾರದಲ್ಲಿ ಸ್ಪಷ್ಟವಾಗಲಿದೆ ಎಂದು ಬಾಂಬ್ ಸಿಡಿಸಿದರು.

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಹೀಗಿದೆ ನೋಡಿ: ನೀವೂ ಒಂದ್ಸಲ ಚೆಕ್ ಮಾಡಿ

ಮಹೇಶ್ ಕುಮಟಳ್ಳಿ ಸಲುವಾಗಿ ರಾಜೀನಾಮೆ ನೀಡುಲು ಸಿದ್ಧ ಎಂದಿರುವ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇವರದ್ದು ಲವ್ ಆಟ್ ಪಸ್ಟ್‌ ನೈಟ್ ಮದುವೆ. ಬೇರೆ ಬಸ್ ಬಂದಾಗ ಹತ್ತಿಕೊಂಡು ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಕೊಳ್ಳುವ ಯಾವ ಮನವಿಗೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಬರಬೇಕಿದ್ದ 35 ಸಾವಿರ ಕೊಟಿ ರೂ ಖೋತಾ ಆಗಿದೆ. ಮದುವೆ ಮಾಡಿ ಪ್ರಸ್ಥಕ್ಕೆ ಅವಕಾಶ ಸಿಗದ ಸ್ಥಿತಿ ಯಡಿಯೂರಪ್ಪದ್ದಾಗಿದೆ. ಯಡಿಯೂರಪ್ಪ ಲಿಂಗಾಯತರಾಗಿ ಹುಟ್ಟಿದ್ದೇ ತಪ್ಪಾದಂತಾಗಿದೆ. ಯಡಿಯೂರಪ್ಪ ಮೇಲೆ ಸಿಟ್ಟಿದ್ದರೆ ಕರ್ನಾಟಕದ ಮೇಲೆ ಯಾಕೆ ಮುಯ್ಯಿ ತೀರಿಸಿಕೊಳ್ಳಬೇಕು? ಎಂದು ಪ್ರಶ್ನಿಸಿದ ಇಬ್ರಾಹಿಂ, ದೆಹಲಿ ಮಾದರಿಯಲ್ಲಿ ರಾಜ್ಯದ ಜನತೆ ತೀರ್ಪು ನೀಡಬೇಕಿದೆ ಎಂದು ಕರೆ ನೀಡಿದರು.

ಕೆಲಸವಿಲ್ಲದ ಹುಚ್ಚ ನನ್ಮಗನಿಗೆ ಮಗಳನ್ನು ಕೊಟ್ಟರೆ ಮಾವನ ಆಸ್ತಿ ಮಾರಿದರಂತೆ. ಅದೇ ರೀತಿ ಕೇಂದ್ರ ಸರಕಾರ ಎಲ್ ಐ ಸಿ, ರೇಲ್ವೆ ಇಲಾಖೆ ಮತ್ತು ಎಚ್ ಪಿಯನ್ನು ಮಾರಾಟ ಮಾಡುತ್ತಿದ್ದಾರೆ. ದೇಶವನ್ನು ಗುಜರಾತಿಗಳು ಆಸ್ತಿ ಹೊಡಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ನೀತಿಗಳನ್ನು ಮತ್ತು ಕ್ರಮಗಳನ್ನು ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ಕಿಡಿಕಾರಿದರು.