Asianet Suvarna News Asianet Suvarna News

3 ಹಗರಣ: ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಇತರ ನಾಯಕರಿಗೆ ಕಾನೂನಿನ ಸಂಕಷ್ಟಬಿಗಿಯಾಗುತ್ತಿದ್ದು,ಮೂರುಬೃಹತ್ ಹಗರಣಗಳ ತನಿಖೆಗಾಗಿ ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರ ಅಂಗಳದಲ್ಲಿ ಮತ್ತಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ.
 

3 Scam Complaint to Governor against CM Siddaramaiah Mallikarjun Kharge gvd
Author
First Published Oct 16, 2024, 10:46 AM IST | Last Updated Oct 16, 2024, 10:46 AM IST

ಬೆಂಗಳೂರು (ಅ.16): ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಇತರ ನಾಯಕರಿಗೆ ಕಾನೂನಿನ ಸಂಕಷ್ಟಬಿಗಿಯಾಗುತ್ತಿದ್ದು,ಮೂರುಬೃಹತ್ ಹಗರಣಗಳ ತನಿಖೆಗಾಗಿ ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರ ಅಂಗಳದಲ್ಲಿ ಮತ್ತಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ. ಮಂಗಳವಾರ ಬಿಜೆಪಿ ನಾಯಕ ಎನ್.ಆರ್.ರಮೇಶ್ ರಾಜಭವನಕ್ಕೆ ತೆರಳಿ ರಾಜ್ಯ ಪಾಲ ಥಾವರ್‌ಚಂದ್ ಗೆಹಲೋತ್ ಅವ ರನ್ನು ಭೇಟಿಯಾಗಿ ಅಭಿಯೋಜನೆಗೆ ಅನು ಮತಿ ನೀಡುವಂತೆ ಕೋರಿದರು. ಪ್ರತ್ಯೇಕ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್ ವಿರುದ್ಧ ಅಭಿಯೋಜನೆಗೆ ಕೋರಲಾಗಿದೆ.

3 ಹಗರಣ ಯಾವುವು?: ಆರ್‌ಎಂವಿ ಎರಡನೇ ಹಂತದಲ್ಲಿ ಬಿಡಿಎ ಸ್ವತ್ತನ್ನು ಭೂಸ್ವಾ ಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದು, ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ನಿಯಮಬಾಹಿರವಾಗಿ ನಿವೇಶನ ಪಡೆದಿ ರುವುದು ಮತ್ತು ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳನ್ನು ಸರ್ಕಾರದ ಸಾಧನೆಗೆ ಬಳಸಿಕೊಂಡು ಜಾಹೀರಾತು ಶುಲ್ಕ ನೀಡದೆ ವಂಚನೆ ಮಾಡಲಾಗಿರುವುದು- ಇವೇ ಆ 3 ಆರೋಪಗಳು. ಈ ಸಂಬಂಧ ತನಿಖೆ ನಡೆಸಲು ಅಭಿ ಯೋಜನೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಎನ್‌. ಆರ್.ರಮೇಶ್ ಮನವಿ ಮಾಡಿದರು.

3 ಹಗರಣಗಳ ವಿವರ: ಆರ್‌ಎಂವಿ 2ನೇ ಹಂತ ಭೂಪಸಂದ್ರ ಗ್ರಾಮದ ಸರ್ವೆ ನಂಬರ್20 ಮತ್ತು 21ರ ಸುಮಾರು 400 ಕೋಟಿ ರು.ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಬಿಡಿಎ ಸ್ವತ್ತನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡ ಲಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿವೃತ್ತ ಅಧಿಕಾರಿಗಳಾದ ಮಹೇಂದ್ರ ಸಿಂಗ್ ಜೈನ್, ಟಿ. ಶ್ಯಾಮ್‌ಭಟ್ ಮತ್ತು ಎನ್.ನರಸಿಂಹಮೂರ್ತಿ, ಎರ್ಮಲ್ ಕಲ್ಪನಾ, ಕೆ. ವಿ. ಜಯಲಕ್ಷಮಮ್ಮ, ಎಸ್‌. ಎನ್. ವಿಜಯಲಕ್ಷ್ಮಿ, ಕೆ.ವಿ.ಪ್ರಭಾಕರ್ ಮತ್ತು ಕೀರ್ತಿ ರಾಜ್ ಶೆಟ್ಟಿ ಆರೋಪಿಗಳಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿ ಸಲಾಗಿದೆ.

ದೋಸ್ತಿಗೆ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ತೊಡಕು: ಯೋಗಿಯೋ? ನಿಖಿಲ್ಲೋ?

ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಿನಲ್ಲಿ ಶೈಕ್ಷಣಿಕ ಉದ್ದೇಶಕ್ಕೆಂದು ನಿಯಮಬಾಹಿ ರವಾಗಿ 250 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಎರಡು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.ಈಸಂಬಂಧಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ, ರಾಧಾಬಾಯಿ, ರಾಧಾಕೃಷ್ಣ ಎಂ.ಬಿ.ಪಾಟೀಲ್ ಮತ್ತಿತ್ತರ ವಿರುದ್ಧ ತನಿಖೆ ನಡೆಸಬೇಕಾದ ಅಗತ್ಯವಿದೆ ಎನ್ನಲಾಗಿದೆ. 2015-16 ಮತ್ತು 2016-17ನೇ ಸಾಲಿ ನಲ್ಲಿ ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳನ್ನು ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆ ಬಳಸಿ ಕೊಂಡು ಜಾಹೀರಾತು ಶುಲ್ಕ ಪಾವತಿಸಿಲ್ಲ. ಈ ಮೂಲಕ ಬಿಬಿಎಂಪಿಗೆ 69 ಕೋಟಿ ರು.ನಷ್ಟು ಜಾಹೀರಾತು ಶುಲ್ಕವನ್ನು ವಂಚಿಸಲಾಗಿದೆ ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios