ಲೋಕಸಭೆ ಚುನಾವಣೆ 2024: 14 ಕ್ಷೇತ್ರದಲ್ಲಿ 247 ಸ್ಪರ್ಧಿಗಳು ಕಣದಲ್ಲಿ..!
ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು, 53 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಯನ್ನು ವಾಪಸ್ ಪಡೆದುಕೊಂಡರು. ಹೀಗಾಗಿ ಅಂತಿಮ ವಾಗಿ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, 226 ಪುರುಷರು, 21 ಮಹಿಳೆಯರು ಅಖಾಡದಲ್ಲಿ ಉಳಿದಿದ್ದಾರೆ.
ಬೆಂಗಳೂರು(ಏ.09): ಲೋಕಸಭೆಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪ್ರಕ್ರಿಯೆ ಗಡುವು ಸೋಮವಾರ ಮುಕ್ತಾಯಗೊಂಡಿದ್ದು, 247 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ಚುನಾವ ಣೆಯ ಮೊದಲ ಹಂತದ ಕಣ ಸಿದ್ದವಾಗಿದ್ದು, ಇನ್ನು ಭರ್ಜರಿ ಪ್ರಚಾರ ಆರಂಭವಾಗಲಿದೆ.
ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು, 53 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಯನ್ನು ವಾಪಸ್ ಪಡೆದುಕೊಂಡರು. ಹೀಗಾಗಿ ಅಂತಿಮ ವಾಗಿ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, 226 ಪುರುಷರು, 21 ಮಹಿಳೆಯರು ಅಖಾಡದಲ್ಲಿ ಉಳಿದಿದ್ದಾರೆ.
Lok Sabha Election 2024: ಚಿತ್ರದುರ್ಗದಲ್ಲಿ ಸೋದರನ ನಾಮಪತ್ರ ವಾಪಸ್ ತೆಗೆಸುವೆ: ರೇಣುಕಾಚಾರ್ಯ
ಇದೇ ತಿಂಗಳ 26ರಂದು ನಡೆಯುವ ಮೊದಲ ಹಂತಕ್ಕೆ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆ ಯಾಗಿದ್ದವು. ಇದರಲ್ಲಿ 300 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು,419ನಾಮಪತ್ರಗಳುಪುರಸ್ಕೃತಗೊಂ ಡಿದ್ದವು. 74 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಒಟ್ಟು 53 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು ಅಭ್ಯರ್ಥಿಗಳು:
ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಡಿಮೆ ಅಂದರೆ 9 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದಾರೆ.
ಕೋಲಾರದ ಎಲ್ಲ 18, ಹಾಸನದ ಎಲ್ಲ 15 ಮತ್ತು ಉಡುಪಿ-ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲ 10 ಅಭ್ಯರ್ಥಿಗಳೂ ಪುರುಷರು ಎಂಬುದು ವಿಶೇಷ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, 8 ಪುರುಷರು ಮತ್ತು ಒಬ್ಬರು ಮಹಿಳೆಯಾಗಿದ್ದಾರೆ. ಉಳಿದಂತೆ ಚಿತ್ರದುರ್ಗದಲ್ಲಿ 20 (18 ಪುರುಷ, 2 ಮಹಿಳೆಯರು), ತುಮಕೂರಿನಲ್ಲಿ 18 (17 ಪುರುಷರು, ಇಬ್ಬರು ಮಹಿಳೆಯರು), ಮಂಡ್ಯದಲ್ಲಿ 14 (13 ಪುರುಷ, ಓರ್ವ ಮಹಿಳೆ), ಮೈಸೂರಿನಲ್ಲಿ 18 (17 ಪುರುಷ, ಓರ್ವ ಮಹಿಳೆ) ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳ ನಾಮಪತ್ರ ಮಾನ್ಯ, 14 ತಿರಸ್ಕೃತ!
ಇನ್ನು ಚಾಮರಾಜನಗರ ಕ್ಷೇತ್ರದಲ್ಲಿ 14 (13 ಪುರುಷ, ಓರ್ವ ಮಹಿಳೆ), ಬೆಂಗಳೂರು ಗ್ರಾಮಾಂತರದಲ್ಲಿ 15 (14 ಪುರುಷ, ಓರ್ವ ಮಹಿಳೆ), ಬೆಂಗಳೂರು ಉತ್ತರದಲ್ಲಿ 21 (15 ಪುರುಷ, 6 ಮಹಿಳೆಯರು), ಬೆಂಗ ಳೂರು ಕೇಂದ್ರದಲ್ಲಿ 24 (21 ಪುರುಷ, 3 ಮಹಿಳೆಯರು), ಬೆಂಗಳೂರು ದಕ್ಷಿಣದಲ್ಲಿ 22 (19 ಪುರುಷ, 3 ಮಹಿಳೆ), ಚಿಕ್ಕಬಳ್ಳಾಪುರದಲ್ಲಿ 29 (28 ಪುರುಷ, ಓರ್ವ ಮಹಿಳೆ), ಕೋಲಾರದಲ್ಲಿ 18 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.
ಅಖಾಡ ಸಿದ್ಧ
* ಏ. 26 ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನ
• ನಾಮಪತ್ರ ವಾಪಸ್ ಗಡುವು ಮುಕ್ತಾಯ, ಇನ್ನು ಭರ್ಜರಿ ಪ್ರಚಾರ ಆರಂಭ
• 247 ಅಭ್ಯರ್ಥಿಗಳ ಪೈಕಿ 226 ಪುರುಷರು, 21 ಮಹಿಳೆಯರು ಅಖಾಡದಲ್ಲಿ
• ಮೊದಲ ಹಂತಕ್ಕೆ 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು
• 300 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ ವಾಗಿದ್ದು, 74 ತಿರಸ್ಕೃತಗೊಂಡಿದ್ದವು