Asianet Suvarna News Asianet Suvarna News

ಡಿಕೆಶಿ, ಕುಟುಂಬದ ಬ್ಯಾಂಕ್‌ ಖಾತೆಗಳಲ್ಲಿ 180 ಕೋಟಿ ರೂ: ಎಲ್ಲಿಂದ? ಹೇಗೆ ಬಂತು ಈ ಹಣ?

ಡಿಕೆಶಿ, ಕುಟುಂಬದ ಬ್ಯಾಂಕ್‌ ಖಾತೆಗಳಲ್ಲಿ .180 ಕೋಟಿ ಹಣ!| ಕೃಷಿ ಆದಾಯಕ್ಕೂ ಅಕೌಂಟ್‌ನಲ್ಲಿ ಇರುವ ಹಣಕ್ಕೂ ಭಾರಿ ವ್ಯತ್ಯಾಸ| ಎಲ್ಲಿಂದ ಬಂತು? ಹೇಗೆ, ಏಕೆ ಬಂತು ಈ ಹಣ?- ಇ.ಡಿ.ಯಿಂದ ತನಿಖೆ

180 Crore Rupees In DK Shivakumar And Family Members Bank Account
Author
Bangalore, First Published Oct 18, 2019, 8:22 AM IST

ರಾಕೇಶ್‌ ಎನ್‌.ಎಸ್‌

ನವದೆಹಲಿ[ಅ.18]: ಡಿ.ಕೆ. ಶಿವಕುಮಾರ್‌ ಮತ್ತವರ ಕುಟುಂಬದ ಬಳಿ 300 ಆಸ್ತಿಗಳಿವೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ಸುಪ್ರೀಂ ಕೋರ್ಟ್‌ನಲ್ಲಿ ಹೇಳಿರಬಹುದು. ಆದರೆ, ಡಿ.ಕೆ.ಶಿವಕುಮಾರ್‌, ಅವರ ಪತ್ನಿ ಉಷಾ ಶಿವಕುಮಾರ್‌ ಮತ್ತು ತಾಯಿ ಗೌರಮ್ಮ ಅವರ ಬ್ಯಾಂಕ್‌ ಖಾತೆಗಳಲ್ಲಿ ಆರೇಳು ಆರ್ಥಿಕ ವರ್ಷದಲ್ಲಿ ಸುಮಾರು .180 ಕೋಟಿ ಜಮೆಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದು ಇ.ಡಿ. ಅಧಿಕಾರಿಗಳೇ ಹುಬ್ಬೇರುವಂತೆ ಮಾಡಿದೆ. ಕೃಷಿ ಆದಾಯಕ್ಕೂ ಈ ಮೂವರ ಖಾತೆಗಳಲ್ಲಿ ಇರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿವುದನ್ನು ಇ.ಡಿ. ಪತ್ತೆ ಹಚ್ಚಿದ್ದು, ಪ್ರಕರಣದ ವಿಚಾರಣೆಯ ಪ್ರಗತಿಯಲ್ಲಿ ಮಹತ್ವದ ಅಂಶವಾಗಿದೆ.

ಇಡಿ ಸುಳಿಯಲ್ಲಿ ಡಿಕೆಶಿ: ಈವರೆಗೆ ಏನೇನಾಯ್ತು? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿ.ಕೆ.ಶಿವಕುಮಾರ್‌ ಅವರು 2012 ರಿಂದ 2018ರವರೆಗೆ ಸಲ್ಲಿಸಿರುವ ಆದಾಯ ತೆರಿಗೆ ರಿಟನ್ಸ್‌ರ್‍ನಲ್ಲಿ ನಾಲ್ಕು ವರ್ಷ ಕೇವಲ ಕೃಷಿ

ಆದಾಯ ಮಾತ್ರವಿರುವುದನ್ನು ತೋರಿಸಿದ್ದು, ಉಳಿದ ಮೂರು ವರ್ಷಗಳಲ್ಲಿ ವಾಣಿಜ್ಯ ವ್ಯವಹಾರ ತೋರಿಸಿದ್ದಾರೆ. ಈ 7 ವರ್ಷಗಳಲ್ಲಿ ಕೃಷಿಯಿಂದ ಹೆಚ್ಚೆಂದರೆ 1 ಕೋಟಿ ರುಪಾಯಿ ಅಕೌಂಟ್‌ನಲ್ಲಿ ಜಮೆಯಾಗಿರಬಹುದು. ಆದರೆ, .120 ಕೋಟಿ ಹಣ ಬಂದಿರುವುದು ಡಿ.ಕೆ.ಶಿವಕುಮಾರ್‌ಅಕ್ರಮವಾಗಿಯೇ ಎಂಬುದು ಇ.ಡಿ.ಯ ಗಟ್ಟಿನಂಬಿಕೆ.

ಡಿ.ಕೆ.ಶಿವಕುಮಾರ್‌ ತಾವು ವ್ಯವಹಾರದಿಂದಲೂ ಆದಾಯ ಗಳಿಸಿದ್ದೇನೆ ಎಂದು ಹೇಳಿಕೊಂಡರೂ ಕಳೆದ 7 ವರ್ಷಗಳಲ್ಲಿ ನಾಲ್ಕು ವರ್ಷಗಳ ಕಾಲ ವಾಣಿಜ್ಯ ವ್ಯವಹಾರವನ್ನು ತಮ್ಮ ಐಟಿಆರ್‌ನಲ್ಲಿ ತೋರಿಸಿಯೇ ಇಲ್ಲ. ಡಿ.ಕೆ.ಶಿವಕುಮಾರ್‌ ಅವರು ಈಗ ತಾವು ಆದಾಯ ತೆರಿಗೆಯ ಮುಂದೆ ನನ್ನ ಆಸ್ತಿ ಮತ್ತು ಹಣಕಾಸು ಮಾಹಿತಿಯನ್ನು ಘೋಷಿಸಿಕೊಂಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರೂ ಈ .120 ಕೋಟಿ ಬಂದಿದ್ದು ಹೇಗೆ ಮತ್ತು ಏಕೆ ಎಂದು ಬಾಯಿ ಬಿಡುತ್ತಿಲ್ಲ ಎಂದು ಇ.ಡಿ. ಅಧಿಕಾರಿಗಳು ಹೇಳುತ್ತಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ತಾಯಿ ಗೌರಮ್ಮರ ಹೆಸರಲ್ಲಿ 38 ಆಸ್ತಿಗಳಿವೆ ಎಂದು ಇ.ಡಿ. ನ್ಯಾಯಾಲಯದಲ್ಲೇ ಹೇಳಿದೆ. ಆದರೆ ಗೌರಮ್ಮ ಅವರ ಬ್ಯಾಂಕ್‌ ಖಾತೆಗಳಲ್ಲಿ ಸುಮಾರು .50 ಕೋಟಿ ಜಮೆಯಾಗಿದೆ. ಗೌರಮ್ಮ ಅವರು ಕೃಷಿಯಿಂದ ಕೇವಲ .1 ಕೋಟಿ ಗಳಷ್ಟುಸಂಪಾದನೆ ಮಾಡಿದ್ದಾರೆ. ಗೌರಮ್ಮ ಅವರ ಐಟಿಆರ್‌ನಲ್ಲಿ ಕೃಷಿ ಆದಾಯದ ಮೂಲಕವೇ .50 ಕೋಟಿ ಬಂದಿದೆ ಎಂದು ಹೇಳಿದ್ದಾರೆ. ಕೃಷಿಯಿಂದ .50 ಕೋಟಿಗಳಷ್ಟುಬರಲು ಸಾಧ್ಯವಿದೆಯೇ ಎಂಬುದು ಇ.ಡಿ.ಯ ಪ್ರಶ್ನೆ.

ಉಷಾ ಶಿವಕುಮಾರ್‌ ಅವರ ಖಾತೆಯಲ್ಲಿ .17 ಕೋಟಿಗಳಷ್ಟುಹಣಕಾಸು ವ್ಯವಹಾರವಾಗಿದೆ. ಉಷಾ ಶಿವಕುಮಾರ್‌ ತಮ್ಮ ಆರು ವರ್ಷಗಳ ರಿಟನ್ಸ್‌ರ್‍ನಲ್ಲಿ ಕೇವಲ ಎರಡು ವರ್ಷಗಳಲ್ಲಿ ಮಾತ್ರ ಕೃಷಿಯೇತರ ಆದಾಯ ಘೋಷಿಸಿದ್ದಾರೆ. ಉಳಿದ ನಾಲ್ಕು ವರ್ಷಗಳ ಕೃಷಿ ಆದಾಯವನ್ನು ಮಾತ್ರ ಹೇಳಿದ್ದಾರೆ. ಉಷಾ ಶಿವಕುಮಾರ್‌ ಅವರ ಕೃಷಿ ಆದಾಯ .80 ಲಕ್ಷಕ್ಕೂ ಮೀರಲು ಸಾಧ್ಯವೇ ಇಲ್ಲ ಎಂಬುದು ಇ.ಡಿ.ಯ ಅಭಿಪ್ರಾಯ.

EDಯಿಂದ ಬಚಾವಾಗಲು ಒಂದು ಹೆಜ್ಜೆ ಮುಂದೆ ಹೋದ ಡಿಕೆ ಶಿವಕುಮಾರ್ ತಾಯಿ, ಪತ್ನಿ

ಡಿ.ಕೆ. ಶಿವಕುಮಾರ್‌ ಮತ್ತವರ ಕುಟುಂಬದ ಇಬ್ಬರು ಸದಸ್ಯರ ಖಾತೆಗಳಲ್ಲಿ ಇಷ್ಟೊಂದು ಪ್ರಮಾಣದ ಹಣ ಜಮೆಯಾಗಿದ್ದು ಹೇಗೆ ಎಂಬುದು ಇ.ಡಿ.ಯ ಪ್ರಶ್ನೆ. ಈ ಹಣ ಡಿ.ಕೆ.ಶಿವಕುಮಾರ್‌ ಅವರಿಗೆ ಸಂದಾಯವಾದ ಹಣವೇ?, ಈ ಹಣ ಏಕೆ ಬಂತು ಎಂಬುದನ್ನು ಈಗ ಇ.ಡಿ. ಕೆದಕುತ್ತಿದೆ.

Follow Us:
Download App:
  • android
  • ios