ಬಿಜೆಪಿಯ 13-14 ಶಾಸಕರು ಕಾಂಗ್ರೆಸ್‌ಗೆ: ಶಾಸಕ ವಿನಯ ಕುಲಕರ್ಣಿ
ಕಳೆದ ಬಾರಿ ಸೋತ ಕೆಲ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟುಮಂದಿ ಬಿಜೆಪಿಯಿಂದ ಕಾಂಗ್ರೆಸ್ ಸೇರುವ ಸಂಭವವಿದೆ. 13ರಿಂದ 14 ಮಾಜಿ ಶಾಸಕರು ಬರುವವರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿದರು.
ವಿಜಯಪುರ (ಆ.20): ಕಳೆದ ಬಾರಿ ಸೋತ ಕೆಲ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಸಾಕಷ್ಟುಮಂದಿ ಬಿಜೆಪಿಯಿಂದ ಕಾಂಗ್ರೆಸ್ ಸೇರುವ ಸಂಭವವಿದೆ. 13ರಿಂದ 14 ಮಾಜಿ ಶಾಸಕರು ಬರುವವರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಹಾಲಿ ಶಾಸಕ ಮಾಹಿತಿ ನನಗಿಲ್ಲ. ಸೋತ ಮಾಜಿ ಶಾಸಕರು ನಮ್ಮ ನಾಯಕರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಪಕ್ಷ ಮೆಚ್ಚಿಕೊಂಡು ಹಲವರು ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದ ಅವರು, ಬಿಜೆಪಿಯಲ್ಲಿ ಹಲವರು ಬೇಜಾರಿನಲ್ಲಿ ಇದ್ದಾರೆ ಇದು ನಿಜ. ಹಾಲಿ ಶಾಸಕರ ಜೊತೆಗೆ ಕೆಲ ಮಾಜಿ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದರು.
ಮುನಿಯಪ್ಪ ಹೇಳಿಕೆ ಸೂಕ್ತ: ಎರಡೂವರೆ ವರ್ಷದ ನಂತರ ನಾವೆಲ್ಲ ಸಚಿವರು ಬದಲಾವಣೆ ಆಗೋಣ. ಹೊಸಬರಿಗೆ ಅವಕಾಶ ಕೊಡೋಣ ಎಂದು ಹೇಳಿದ್ದಾರೆ. ಇದು ಸಂತಸದ ಸಂಗತಿಯಾಗಿದೆ. ನಿಗಮ, ಮಂಡಳಿಗಳಿಗೆ 30 ಶಾಸಕರಂತೆ ಎರಡು ಬಾರಿ ನೇಮಕವಾದರೆ ಹಾಗೇ ಎರಡು ಬಾರಿ ಸಚಿವರು ಬದಲಾವಣೆಯಾದರೆ ನಮ್ಮ ಶಾಸಕರು ಎಲ್ಲರಿಗೂ ಸಚಿವ ಸ್ಥಾನ ಲಭಿಸಿದಂತಾಗುತ್ತದೆ. ಮುನಿಯಪ್ಪ ಅವರು ಟೋಟಲ್ ಟೀಂ ಬದಲಾವಣೆ ಆಗಬೇಕು ಎಂದು ಹೇಳಿರುವುದು ಸೂಕ್ತವಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನುಡಿದರು.
2ಎ ಮೀಸಲಾತಿ ನೀಡಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಮತ: ಶಾಸಕ ವಿನಯ್ ಕುಲಕರ್ಣಿ
ಡಿಕೆಶಿ ಸೂಪರ್ ಸಿಎಂ ಎಂದು ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ವಿನಯ ಕುಲಕರ್ಣಿ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಮಂತ್ರಿಗಳು ಸಮರ್ಥರಿದ್ದಾರೆ. ಅವರಿಗೆ ಸಾಮರ್ಥ್ಯ ಇದೆ. ಸಾಕಷ್ಟುಅನುಭವವಿದೆ. ಹಾಗಾಗಿ ನಮ್ಮಲ್ಲಿ ಯಾರೂ ಒಬ್ಬರು ಸೂಪರ್ ಸಿಎಂ ಎನ್ನುವಂತಹ ಮಾತಿಲ್ಲ. ಎಲ್ಲರೂ ಸೂಪರ್ ಇದ್ದಾರೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ವಿನಯ ಕುಲಕರ್ಣಿ ಅವರು, ನಾವೇನೂ ಅವರಿಗೆ ಎದುರಾಳಿ ಅಲ್ಲ. ಮುನೇನಕೊಪ್ಪ ಅವರಿಗೆ ರಾಜಕೀಯದಲ್ಲಿ ಬಹಳಷ್ಟುಅನುಭವವಿದೆ. ಪಕ್ಷಕ್ಕೆ ಬಲ ತುಂಬುವವರು ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ನುಡಿದರು. ಕುರುಬ ಜನಾಂಗ ಎಸ್.ಟಿ.ಗೆ ಸೇರಿದರೆ ನಮಗೆ 2ಎ ಕೊಡಲು ಒತ್ತಾಯ ಮಾಡುತ್ತೇವೆ. ಅವರಿಗೆ ಎಲ್ಲ ರೀತಿ ಸಹಕಾರ ನೀಡುತ್ತೇವೆ ಎಂದರು. ಸಿಎಂ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಲು ಡಿಕೆಶಿ ಯಾರ ಬಳಿಯೂ ಹೋಗಿಲ್ಲ. ಸಿದ್ದರಾಮಯ್ಯನವರನ್ನು ವೀಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದು ಸುಳ್ಳು ಹೇಳಿಕೆ ಎಂದು ಯತ್ನಾಳಗೆ ಟಾಂಗ್ ನೀಡಿದರು.
ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ: ಪ್ರಲ್ಹಾದ್ ಜೋಶಿ
ಹೊಸಬರಿಗೆ ಸಚಿವ ಸ್ಥಾನ: ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟದ ಇಡೀ ಟೀಂ ಬದಲಾಗಲಿದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗುವ ಅವಕಾಶವಿದೆ.ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ 136 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಕೇವಲ 34 ಶಾಸಕರಿಗೆ ಸಚಿವರಾಗಲು ಅವಕಾಶವಿದೆ. ಎಲ್ಲ ಶಾಸಕರನ್ನೂ ಸಚಿವರನ್ನು ಮಾಡಲು ಬರುವುದಿಲ್ಲ. ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಬದಲಾವಣೆ ಆಗಲಿದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಸಚಿವ ಸ್ಥಾನ ಸಿಗದೇ ಅತೃಪ್ತಿ ಹೊಂದಿದವರ ಅಸಮಾಧಾನ ಕಡಿಮೆಯಾಗಲಿದೆ ಎಂದರು.