ಟೆಕ್ ಮಹೀಂದ್ರ ಸಾರಥ್ಯದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚೆಸ್ ಲೀಗ್!
ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರ ಹಾಗೂ ಟೆಕ್ ಮಹೀಂದ್ರ ಇದೀಗ ಹೊಸ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಲೀಗ್ ಟೂರ್ನಿ ಆಯೋಜಿಸುತ್ತಿದೆ. ವಿಶ್ವಚಾಂಪಿಯನ್ ವಿಶ್ವನಾಥ್ ಆನಂದ್ ಸಾರಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ಫೆ.22): ಭಾರತದಲ್ಲೀಗ ಲೀಗ್ ಟೂರ್ನಮೆಂಟ್‌ಗಳು ಹೆಚ್ಚಾಗುತ್ತಿದೆ. ಐಪಿಎಲ್ ಯಶಶಸ್ಸಿನ ಬಳಿಕ ಪ್ರತಿ ಕ್ರೀಡಾ ಕ್ಷೇತ್ರ ತನ್ನದೇ ಆದ ಲೀಗ್ ಟೂರ್ನಿಗಳನ್ನು ಹೊಂದಿದೆ. ಪ್ರೊ ಕಬಡ್ಡಿ ಲೀಗ್, ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್, ಬ್ಯಾಡ್ಮಿಂಟನ್ ಲೀಗ್, ಸೇರಿದಂತೆ ಎಲ್ಲಾ ಲೀಗ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ಇದೀಗ ಮತ್ತೊಂದು ಲೀಗ್ ಸೇರಿಕೊಳ್ಳುತ್ತಿದೆ. ಟೆಕ್ ಮಹೀಂದ್ರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚೆಸ್ ಲೀಗ್ ಟೂರ್ನಿ ಆಯೋಜಿಸುತ್ತಿದೆ.
ವಿಶ್ವನಾಥನ್ ಆನಂದ್ ಚೆಸ್ ವಿಶ್ವ ಚಾಂಪಿಯನ್ ಹಿಂದಿದೆ ಬಾಲು ಸರ್ ನೆರವು!
ಟೆಕ್ ಮಹೀಂದ್ರ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಚೆಸ್ ಲೀಗ್ ಟೂರ್ನಿಗೆ 5 ಬಾರಿ ಟೆಸ್ ವಿಶ್ವಚಾಂಪಿಯನ್, ಭಾರತದ ಹೆಮ್ಮೆಯ ಚೆಸ್ ಪಟು ವಿಶ್ವನಾಥನ್ ಆನಂದ್ ಮಾರ್ಗದರ್ಶಕ, ಸಲಹೆಗಾರ ಹಾಗೂ ಚೀಫ್ ಫೆಲಿಸಿಟೇಟರ್ ಆಗಿದ್ದಾರೆ ಎಂದು ಟೆಕ್ ಮಹೀಂದ್ರ ಹೇಳಿದೆ
ಟೀಂ ಇಂಡಿಯಾದ 6 ಕ್ರಿಕೆಟಿಗರಿಗೆ SUV ಕಾರ್ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರ..!
ಭಾರತದ ಯುವ ಹಾಗೂ ಹೊಸ ಚೆಸ್ ಪ್ರತಿಭಾನ್ವಿತರನ್ನು ಪರಿಚಯಿಸಲು, ಅವರಿಗೆ ವೇದಿಕೆ ನೀಡಲು ಈ ಟೆಕ್ ಮಹೀಂದ್ರ ಚೆಸ್ ಲೀಗ್ ಪ್ರಮುಖ ಪಾತ್ರನಿರ್ವಹಿಸಲಿದೆ. ವಿಶ್ವನಾಥನ್ ಆನಂದ್ ಕಾರಣ ಭಾರತದಲ್ಲಿ ಚೆಸ್ ಕ್ರೀಡೆಗೆ ಅಪಾರ ಅಭಿಮಾನಿಗಳಿದ್ದಾರೆ. ಅಷ್ಟೇ ಚೆಸ್ ಆಸಕ್ತರು ಇದ್ದಾರೆ. ಹೀಗಾಗಿ ಕ್ರೀಡೆಯ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಲು ಹಾಗೂ ಚೆಸ್ ಕ್ರೀಡೆಗೆ ಹೊಸ ಆಯಾಮ ನೀಡಲು ಈ ಲೀಗ್ ಟೂರ್ನಿ ಆಯೋಜಿಸಲಾಗುತ್ತಿದೆ ಎಂದು ಟೆಕ್ ಮಹೀಂದ್ರ ಹೇಳಿದೆ.
ಭಾರತ ಸೇರಿದಂತೆ ವಿಶ್ವಾದ್ಯಂತ ಚೆಸ್ ಜನಪ್ರಿಯವಾಗಿದೆ. ಇದೀಗ ಟೆಕ್ ಮಹೀಂದ್ರ ಚೆಸ್ ಲೀಗ್ ಟೂರ್ನಿ ಆರಂಭಿಸುತ್ತಿದೆ. ಈ ಲೀಗ್ ಟೂರ್ನಿಯ ಭಾಗವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಈ ಟೂರ್ನಿ ಮೂಲಕ ಭಾರತದ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ. ಇಷ್ಟೇ ಅಲ್ಲ ಚೆಸ್ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ತುದಿಗಾಲಲ್ಲಿ ನಿಂತಿರುವ ಎಲ್ಲಾ ಉತ್ಸಾಹಿಗಳಿಗೆ ಈ ಲೀಗ್ ಟೂರ್ನಿ ಸಹಕಾರಿಯಾಗಿದೆ ಎಂದು ವಿಶ್ವನಾಥನ್ ಆನಂದ್ ಹೇಳಿದ್ದಾರೆ.