ಹೊಟ್ಟೆ ಹಸಿವಾದಾಗ ಆನ್‌ಲೈನ್‌ ನಲ್ಲಿ ಆಹಾರ ಆರ್ಡರ್ ಮಾಡುವುದು ನಗರವಾಸಿಗಳಿಗೆ ಹೊಸದೇನೂ ಅಲ್ಲ.  ಆಹಾರ ಸೇವೆ ನೀಡಲು ಅನೇಕ ಕಂಪನಿಗಳು ಹುಟ್ಟಿಕೊಂಡಿವೆ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಬೇರೆಯದೆ ಕತೆ ಹೇಳುತ್ತಿದೆ.

ಬೆಂಗಳೂರು[ಡಿ.11] ಜೋಮ್ಯಾಟೋದ ಆಹಾರ ಸರಬರಾಜು ಮಾಡುವ ವ್ಯಕ್ತಿಯೊಬ್ಬ ಹೊಟ್ಟೆ ಹಸಿವಿನಿಂದಲೋ ಏನೋ ಗ್ರಾಹಕರಿಗೆ ನೀಡಬೇಕಿದ್ದ ಆಹಾರವನ್ನು ಸ್ವಲ್ಪ ತಿಂದು ಪುನಃ ಪ್ಯಾಕ್ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ಇದಕ್ಕೆ ಪರ ಮತ್ತು ವಿರೋಧದ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲೂ ವ್ಯಕ್ತವಾಗಿದೆ. ಆದರೆ ಅಂತಿಮವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೊಮಾಟೋ, ನಾವು ತನಿಖೆಯನ್ನು ನಡೆಸಿದ್ದದೇವೆ. ವಿಡಿಯೋದಲ್ಲಿ ಕಂಡು ಬಂದ ವ್ಯಕ್ತಿ ಮಧುರೈನ ಎಜೆಂಟ್‌ ಆಗಿದ್ದು ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಈ ಘಟನೆಗೆ ಗ್ರಾಹಕರ ಬಳಿ ಕ್ಷಮಾಪಣೆ ಕೇಳುತ್ತೇವೆ ಎಂದು ಹೇಳಿದೆ.

ಇವಳೆಂಥಾ ದಿಟ್ಟೆ! ’ಮಿಡ್ ನೈಟ್’ ವಿಡಿಯೋ ಹಾಕಿದ್ದಾಳೆ ಪೂನಂ ಪಾಂಡೆ

ಆಹಾರ ಡಿಲೆವರಿ ಮಾಡುವ ವ್ಯಕ್ತಿ ಗ್ರಾಹಕರಿಗೆ ಸೇರಬೇಕಾದ್ದನ್ನು ತಿಂದಿದ್ದು ತಪ್ಪೇ ಇರಬಹುದು.. ಆದರೆ ಆ ಕ್ಷಣಕ್ಕೆ ಆತನ ಸ್ಥಿತಿ ಏನಾಗಿತ್ತೋ? ಎಂದು ಕೆಲವರು ಮರುಕ ವ್ಯಕ್ತಪಡಿಸಿದ್ದರೆ.. ಕಂಪನಿ ತೆಗೆದುಕೊಂಡ ಕ್ರಮ ಸರಿಯಾಗಿದೆ. ಕರ್ತವ್ಯದಿಂದ ವಿಮುಖರಾದವರಿಗೆ ಇಂಥ ಶಿಕ್ಷೆಯನ್ನೇ ನೀಡಬೇಕು ಎಂದು ಹೇಳಲಾಗಿದೆ. 

"