ಮೈಸೂರು: ಏಪ್ರಿಲ್‌ನಿಂದ ಜೂನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ಚಲಿಸುತ್ತದೆ. ಜೂ.22ರಂದು ಸೂರ್ಯ ಪಥಸಂಚಲನ ಗರಿಷ್ಠ ಮಟ್ಟವನ್ನು ಮುಟ್ಟಿನಂತರ ದಕ್ಷಿಣ ದಿಕ್ಕಿಗೆ ಹಿಂದಿರುತ್ತದೆ. ಇದೇ ದಕ್ಷಿಣಾಯನ. ಹೀಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಶೂನ್ಯ ನೆರಳು ಕಾಣಿಸಿಕೊಳ್ಳುತ್ತಿದ್ದು, ಏ.24ರಂದು ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲಿದೆ.

ಮೈಸೂರಿನಲ್ಲಿ ಸೋಮವಾರ ಮಧ್ಯಾಹ್ನ 12.22ಕ್ಕೆ ಸರಿಯಾಗಿ ನಡುನೆತ್ತಿಗೆ ಸೂರ್ಯ ಬಂದಾಗ ಬಹುತೇಕ ಮಂದಿಯ ನೆರಳು ಕ್ಷೀಣವಾಯಿತು. ಏ.22ರಂದು ಮೈಸೂರಿನಲ್ಲಿ ಕಂಡ ಶೂನ್ಯ ನೆರಳು, ಏ.23ರಂದು ಮಂಡ್ಯದಲ್ಲಿ ಕಾಣಿಸಿಕೊಂಡಿತು. ಏ.24ರಂದು ಬೆಂಗಳೂರು, ಏ.25ರಂದು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಉಡುಪಿ, ಏ.27ರಂದು ಶಿವಮೊಗ್ಗ, ಏ.28ರಂದು ಚಿತ್ರದುರ್ಗ, ಏ.29ರಂದು ದಾವಣಗೆರೆ, ಏ.30ರಂದು ಕಾರವಾರ, ಹಾವೇರಿ, ಮೇ 1ರಂದು ಬಳ್ಳಾರಿ, ಮೇ 2ರಂದು ಧಾರವಾಡ, ಗದಗ, ಕೊಪ್ಪಳ, ಮೇ 3ರಂದು ಬೆಳಗಾವಿ, ಮೇ 5ರಂದು ಬಾಗಲಕೋಟೆ, ರಾಯಚೂರು, ಮೇ 7ರಂದು ವಿಜಯಪುರ, ಮೇ 9ರಂದು ಕಲಬು​ರ​ಗಿ, ಮೇ 11ರಂದು ಬೀದರ್‌ನಲ್ಲಿ ಶೂನ್ಯ ನೆರಳು ಕಾಣಿಸಿಕೊಳ್ಳಲಿದೆ.

ಏ.25ರಂದು ಬೆಂಗಳೂರಿನ ನೆಹರು ತಾರಾಲಯದಲ್ಲಿ ಶೂನ್ಯ ನೆರಳು ಕುರಿತ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು, ಮಧ್ಯಾಹ್ನ 12.17ಕ್ಕೆ ಬೆಂಗಳೂರಿಗರು ಹಾಜರಿದ್ದರೆ ಎಲ್ಲವನ್ನೂ ತಿಳಿಯಬಹುದು