ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು.
ಲಾಹೋರ್(ಅ.22): ಭಾರತ ಮೂಲದ ಎಂಜಿನಿಯರ್ ಒಬ್ಬರ ನೆರವಿಗೆ ಮುಂದಾಗಿ 2015ರಲ್ಲಿ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನ ಪತ್ರಕರ್ತೆಯನ್ನು ರಕ್ಷಣೆ ಮಾಡಲಾಗಿದೆ.
ಮುಂಬೈ ಮೂಲದ ಹಮೀದ್ ಅನ್ಸಾರಿ, ತನ್ನ ಪ್ರಿಯತಮೆ ಭೇಟಿಯಾಗಲು ಅಕ್ರಮವಾಗಿ ಪಾಕ್ ಪ್ರವೇಶಿದ್ದ. ಆತ ಭಾರತೀಯ ಗೂಢಚರ ಎಂದು ಪೊಲೀಸರು ಕೇಸು ದಾಖಲಿಸಿದ್ದರು. ಆತನಿಗೆ 3 ವರ್ಷ ಜೈಲಾಗಿತ್ತು. ಈತನ ಬಿಡುಗಡೆಗಾಗಿ ಪತ್ರಕರ್ತೆ ಝೀನತ್ ಹೋರಾಟ ನಡೆಸುತ್ತಿದ್ದರು. ಆದರೆ ವಿರುದ್ದ ಸ್ಥಳೀಯರು ಆಕೆಗೆ ಬೆದರಿಕೆ ಹಾಕಿದ್ದರು.
ಇದರ ಹೊರತಾಗಿಯೂ ಹೋರಾಟ ಮುಂದುವರೆಸಿದ್ದ ಆಕೆಯನ್ನು 2015ರಲ್ಲಿ ಅಪಹರಿಸಲಾಗಿತ್ತು.
