ದೇವರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ  ಕುಮಾರ ಸ್ವಾಮಿ ನಾಟಕವಾಡುತ್ತಿದ್ದಾರೆ.ಅವರು ಧರ್ಮಸ್ಥಳ ಕ್ಕೆ ಬಂದು ಪ್ರಮಾಣ ಮಾಡಲಿ.

ಉಡುಪಿ(ಏ.22): ಪಕ್ಷ ವಿರೋಧಿ ಚಟುವಟಿಕೆಗಾಗಿ ಜೆಡಿಎಸ್ ನಿಂದ ಅಮಾನತುಗೊಂಡಿರುವ ಒಂದು ಕಾಲದ ಕುಮಾರಸ್ವಾಮಿಯ ಗಳಸ್ಯ ಕಂಠಸ್ಯ ಜಮೀರ್ ಅಹಮದ್, ಎಚ್ಡಿಕೆ ವಿರುದ್ದ ಗುರುತರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರ ವಿರುದ್ದ ಇನ್ನೊಂದು ಬಾಂಬ್ ಸಿಡಿಸಿರುವ ಜಮೀರ್, ರಾಜ್ಯಸಭಾ ಚುನಾವಣೆಯ ವೇಳೆ ಅಡ್ಡಮತದಾನ ಮಾಡಲು ನಮಗೆ ತಿಳಿಸಿದ್ದೇ ಕುಮಾರಸ್ವಾಮಿ ಎಂದು ಜಮೀರ್ ಹೇಳಿದ್ದಾರೆ.

ಇದಕ್ಕೆ ತದ್ವಿರುದ್ದವಾಗಿ ಹೆಚ್ ಡಿ ಕೆ ನಾನು ಈ ಆರೋಪವನ್ನು ಒಪ್ಪುವುದಿಲ್ಲಾ .ನಾನೆಂದು ಜಮೀರ್ ಗೆ ಅಡ್ಡಮತದಾನ ಮಾಡಲು ಹೇಳಿಲ್ಲ. ಈ ಆರೋಪವನ್ನು ಹಿಂಪಡೆಯಲು ಜಮೀರ್ ಹೇಳಿದಲ್ಲೇ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೆನೆ ಎಂದರು. ಆದರೆ ಜಮೀರ್ ದೇವರ ಮೇಲೆ ಆಣೆ ಪ್ರಮಾಣ ಮಾಡುವ ಮೂಲಕ ಕುಮಾರ ಸ್ವಾಮಿ ನಾಟಕವಾಡುತ್ತಿದ್ದಾರೆ.ಅವರು ಧರ್ಮಸ್ಥಳ ಕ್ಕೆ ಬಂದು ಪ್ರಮಾಣ ಮಾಡಲಿ.ನಾನು ಖುರಾನ್ ಸಹಿತ ನಾನು ಬರುವೆನೆಂದ ಜಮೀರ್ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ.ಅಲ್ಲದೇ ಇನ್ನು ಜೆಡಿಎಸ್ ಮುಗಿದ ಅಧ್ಯಾಯ.ಇನ್ನೇನಿದ್ದರೂ ಕಾಂಗ್ರೆಸ್​​​​ನಲ್ಲಿ​​ ನನ್ನ ಇನ್ನಿಂಗ್ಸ್ ಆರಂಭ ಎಂದು ಹೇಳಿಕೊಂಡರು.