ವಿಧಾನಸೌಧದ ಆವರಣದಲ್ಲಿ ಸಿಕ್ಕ ಹಣದ ಬಗ್ಗೆ ಯಡಿಯೂರಪ್ಪಗೆ ಗೊತ್ತು ಎಂದು ಹೆಚ್ ಡಿಕೆ ಮಾಡಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫ್ಲ್ಯಾಟ್ ಕೊಳ್ಳುವುದಕ್ಕೆ ತರುತ್ತಿದ್ದ ಹಣ ಅಂತ ಹೇಳಿದ್ದಾರೆ. ಸುಮ್ಮನೆ ಯಡಿಯೂರಪ್ಪ ಅವರಿಗೆ ಸೇರಿದ ಹಣ ಅಂತ ಹೇಳಿದ್ದಾರೆ. ಇದು ಒಬ್ಬ ಮಾಜಿ ಮುಖ್ಯಮಂತ್ರಿ ಗೆ ಶೋಭೆ ತರುವ ವಿಚಾರವಲ್ಲ ಎಂದಿದ್ಧಾರೆ.
ಬೆಂಗಳೂರು(ಅ.25): ನಮಗಾಗಿ ಜೆಡಿಎಸ್ ಪಕ್ಷದಲ್ಲಿ ಇಲ್ಲ, ನಮ್ಮನ್ನ ನಂಬಿ ಲಕ್ಷಾಂತರ ಜನ ಕಾರ್ಯಕರ್ತರು ಇದ್ದಾರೆ. ಅವರಿಗಾಗಿ ಜೆಡಿಎಸ್ ಪಕ್ಷದಲ್ಲಿ ಇದ್ದೇವೆ ೆಂದು ಜೆಡಿಎಸ್ ಸಾಸಕ ಜಮೀರ್ ಅಹಮ್ಮದ್ ಹೇಳಿದ್ದಾರೆ.
ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾತನಾಡುವುದು ಬಿಡಲಿ, ಮಾಧ್ಯಮಗಳ ಮುಂದೆ ನಮ್ಮನ್ನು ಕೆರಳಿಸುವ ಮಾತುಗಳು ಆಡದಿರಲಿ. ನಾವು ಪಕ್ಷಕ್ಕೆ ಬೇಕಿಲ್ಲದಿದ್ದರೆ ಪಕ್ಷದಿಂದ ಹೊರಹಾಕಲಿ. ಅಮಾನತು ಮಾಡಿರುವುದು ಏಕೆ ಎಂದು ಜಮೀರ್ ಅಹಮ್ಮದ್ ಪ್ರಶ್ನಿಸಿದ್ಧಾರೆ.
ಇದೇವೇಳೆ, ವಿಧಾನಸೌಧದ ಆವರಣದಲ್ಲಿ ಸಿಕ್ಕ ಹಣದ ಬಗ್ಗೆ ಯಡಿಯೂರಪ್ಪಗೆ ಗೊತ್ತು ಎಂದು ಹೆಚ್ ಡಿಕೆ ಮಾಡಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫ್ಲ್ಯಾಟ್ ಕೊಳ್ಳುವುದಕ್ಕೆ ತರುತ್ತಿದ್ದ ಹಣ ಅಂತ ಹೇಳಿದ್ದಾರೆ. ಸುಮ್ಮನೆ ಯಡಿಯೂರಪ್ಪ ಅವರಿಗೆ ಸೇರಿದ ಹಣ ಅಂತ ಹೇಳಿದ್ದಾರೆ. ಇದು ಒಬ್ಬ ಮಾಜಿ ಮುಖ್ಯಮಂತ್ರಿ ಗೆ ಶೋಭೆ ತರುವ ವಿಚಾರವಲ್ಲ ಎಂದಿದ್ಧಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿದ್ದರೂ ಕೂಡಾ ಗೆಲ್ಲುತ್ತಿರಲಿಲ್ಲ. ಅವರ ನಡೆ ವಿರೋಧಿಸಿ ನಾವು ಕಾಂಗ್ರೆಸ್`ಗೆ ಮತ ನೀಡಿದ್ದೆವು. ಇಷ್ಟಕ್ಕೂ ಫಾರೂಕ್ ಜೆಡಿಎಸ್ ಕಾರ್ಯಕರ್ತರಲ್ಲ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
