ಕಳೆದ ಒಂದು ತಿಂಗಳ ಹಿಂದಿನವರೆಗೂ ನಾವು ಜೆಡಿಎಸ್ ಪಕ್ಷದಲ್ಲೇ ಇರಲು ತಿರ್ಮಾನಿಸಿದ್ದೆವು. ಆದರೆ ಕುಮಾರ್‌ಸ್ವಾಮಿಯವರ ಲೂಸ್'ಟಾಕ್'ನಿಂದ ಹಿಂದೆ ಸರಿದಿದ್ದೇವೆ. 

ಬೆಂಗಳೂರು(ಆ.01): ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹುಟ್ಟುಹಬ್ಬ ಬಾಲಿವುಡ್ ತಾರೆಯರಿಂದ ರಂಗೇರಿತ್ತು. ಬಾಲಿವುಡ್ ನಟ ಸೋನು ಸೂದ್, ಸಲ್ಮಾನ್ ಖಾನ್ ಸಹೋದರರಾದ ಅರ್ಬಾಜ್ ಖಾನ್ , ಸೋಹೈಲ್ ಖಾನ್, ಗುಲ್ಶನ್ ಗ್ರೋವರ್ ಆಗಮಿಸಿದ್ದರು. ಅವರ ಸಮ್ಮುಖದಲ್ಲಿಯೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.

ಬಳಿಕ ಮಾತನಾಡಿದ ಜಮೀರ್ ಅಹಮದ್, ಕಳೆದ ಒಂದು ತಿಂಗಳ ಹಿಂದಿನವರೆಗೂ ನಾವು ಜೆಡಿಎಸ್ ಪಕ್ಷದಲ್ಲೇ ಇರಲು ತಿರ್ಮಾನಿಸಿದ್ದೆವು. ಆದರೆ ಕುಮಾರ್‌ಸ್ವಾಮಿಯವರ ಲೂಸ್'ಟಾಕ್'ನಿಂದ ಹಿಂದೆ ಸರಿದಿದ್ದೇವೆ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ ನನ್ನ ರಾಜಕೀಯ ಗುರು ಅವರ ಬಗ್ಗೆ ಅಭಿಮಾನವಿದೆ. ಆದರೆ ಜೆಡಿಎಸ್ ಪಕ್ಷದತ್ತ ಮತ್ತೆ ಮುಖ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.