ದಂಗಲ್ ಖ್ಯಾತಿಯ ನಟಿ ಝೈರಾ ಮೇಲೆ ವಿಮಾನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಂಬಂಧವಾಗಿ ಪ್ರಕರಣ ದಾಖಲಿಸಲು ನಟಿಯ ತಾಯಿ ನಿರಾಕರಿಸಿದ್ದಾರೆ ಎಂಬ ವಿಚಾರವನ್ನು ನಾಗರಿಕ ವಿಮಾನಗಳ ಪ್ರಧಾನ ನಿರ್ದೇಶನಾಲಯಕ್ಕೆ `ವಿಸ್ತಾರ' ಖಾಸಗಿ ವಿಮಾನ ಸಂಸ್ಥೆ ತಿಳಿಸಿದೆ.
ನವದೆಹಲಿ (ಡಿ.16) : ದಂಗಲ್ ಖ್ಯಾತಿಯ ನಟಿ ಝೈರಾ ಮೇಲೆ ವಿಮಾನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಂಬಂಧವಾಗಿ ಪ್ರಕರಣ ದಾಖಲಿಸಲು ನಟಿಯ ತಾಯಿ ನಿರಾಕರಿಸಿದ್ದಾರೆ ಎಂಬ ವಿಚಾರವನ್ನು ನಾಗರಿಕ ವಿಮಾನಗಳ ಪ್ರಧಾನ ನಿರ್ದೇಶನಾಲಯಕ್ಕೆ `ವಿಸ್ತಾರ' ಖಾಸಗಿ ವಿಮಾನ ಸಂಸ್ಥೆ ತಿಳಿಸಿದೆ.
ಡಿ.9ರಂದು ದೆಹಲಿಯಿಂದ ಮುಂಬೈಗೆ ವಿಸ್ತಾರ ಎಂಬ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದಾಗಿ ನಟಿ ಝೈರಾ ಆರೋಪಿಸಿದ್ದರು. ಆದರೆ, ಈ ಕುರಿತು ಕೇಸು ದಾಖಲಿಸಲು ನಟಿಯ ತಾಯಿ ಹಿಂಜರಿದಿದ್ದಾರೆಂದು ಮೂಲಗಳು ತಿಳಿಸಿವೆ.
