ಶುಗರ್ ಇದೆ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾದ ಯುವಕ

First Published 14, Mar 2018, 11:25 AM IST
Youth Suicide In Bengaluru
Highlights

ಶುಗರ್ ಕಾಯಿಲೆ ಇದೆ ಎಂದು ಗೊತ್ತಾಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್’ನಲ್ಲಿ ನಡೆದಿದೆ.

ಬೆಂಗಳೂರು : ಶುಗರ್ ಕಾಯಿಲೆ ಇದೆ ಎಂದು ಗೊತ್ತಾಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್’ನಲ್ಲಿ ನಡೆದಿದೆ.

ಮೂಲತಃ ಹಾಸನದವನಾದ  ಮಧು (25) ಎಂಬ ಯುವಕ ಇಲ್ಲಿ ಅಣ್ಣ ಅತ್ತಿಗೆಯೊಂದಿಗೆ ವಾಸವಾಗಿದ್ದ.

ಕೆಲ ದಿನಗಳಿಂದ ಈತನಿಗೆ ಅನಾರೋಗ್ಯ ಕಾಡುತ್ತಿತ್ತು. ಬಳಿಕ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗ ಶುಗರ್ ಇರುವ ವಿಚಾರ ತಿಳಿದು ಬಂದಿದೆ.

ನಿನ್ನೆ ಈ ವಿಚಾರವನ್ನು ತನ್ನ ಅತ್ತಿಗೆಯೊಂದಿಗೆ ಹೇಳಿಕೊಂಡಿದ್ದ ಮಧು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮಹಾಲಕ್ಷ್ಮೀ ಲೇ ಔಟ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

loader