ರಸ್ತೆ ಬದಿಯಲ್ಲಿ ನಿಂತಿದ್ದ ಐವರು ಯುವಕರು ಗಣೇಶ್‌ ಆವಾಜ್ ಹಾಕಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಆ ಯುವಕರು ಗಣೇಶ್‌'ಗೆ ಎದೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತತ್'ಕ್ಷಣವೇ ಸ್ಥಳೀಯರು ಗಣೇಶ್​'ನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸುತ್ತಾರೆ. ಆದರೆ, ಮಾರ್ಗ ಮಧ್ಯೆಯೇ ಗಣೇಶ್ ಮೃತಪಟ್ಟಿದ್ದಾನೆ. ಗಣೇಶ್ ಮೃತದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.

ಬೆಂಗಳೂರು(ಆ. 28): ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನೊಬ್ಬನ ಬರ್ಬರ ಹತ್ಯೆಯಾಗಿರುವ ಘಟನೆ ಇಲ್ಲಿಯ ಹನುಮಂತನಗರ ಬಳಿಯ ಶ್ರೀನಿವಾಸನಗರದಲ್ಲಿ ನಡೆದಿದೆ. ಕಾಳಿದಾಸ ಲೇಔಟ್ ನಿವಾಸಿ ಗಣೇಶ್ ಎಂಬಾತ ಹತ್ಯೆಯಾಗಿರುವ ಯುವಕ.

ನಿನ್ನೆ ಸಂಜೆ ಆರು ಗಂಟೆಗೆ ರಸ್ತೆ ಬದಿಯಲ್ಲಿ ನಿಂತಿದ್ದ ಐವರು ಯುವಕರು ಗಣೇಶ್‌ ಆವಾಜ್ ಹಾಕಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಆ ಯುವಕರು ಗಣೇಶ್‌'ಗೆ ಎದೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತತ್'ಕ್ಷಣವೇ ಸ್ಥಳೀಯರು ಗಣೇಶ್​'ನನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸುತ್ತಾರೆ. ಆದರೆ, ಮಾರ್ಗ ಮಧ್ಯೆಯೇ ಗಣೇಶ್ ಮೃತಪಟ್ಟಿದ್ದಾನೆ. ಗಣೇಶ್ ಮೃತದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.

ಕೊಲೆಯಾದ ಗಣೇಶ್'​ಗೆ ಮದುವೆ ನಿಶ್ಚಯವಾಗಿತ್ತಲ್ಲದೇ, ಒಂದು ತಿಂಗಳ ಹಿಂದೆಯಷ್ಟೇ ಎಂಗೇಜ್​'ಮೆಂಟ್ ಕೂಡ ನಡೆದಿತ್ತೆನ್ನಲಾಗಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.