ಉದ್ಯೋಗ ಸಿಗದೆ ಖಿನ್ನತೆಗೊಳಗಾಗಿದ್ದ ಎಂಜಿನಿಯ ರಿಂಗ್‌ ಸ್ನಾತಕೋತ್ತರ ಪದವೀಧರನೊಬ್ಬ (ಎಂಟೆಕ್‌) ತನ್ನ ಸೋದರ ಸಂಬಂಧಿಗೆ ಸ್ಮಶಾನದ ಲೋಕೇಷನ್‌ ಮ್ಯಾಪ್‌ಅನ್ನು ವ್ಯಾಟ್ಸಾಪ್‌ ಮಾಡಿ ಬಳಿಕ ಆ ಸ್ಥದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಕ್ಕೂರಿನಲ್ಲಿ ನಡೆದಿದೆ.

ಬೆಂಗಳೂರು(ಜೂ.09): ಉದ್ಯೋಗ ಸಿಗದೆ ಖಿನ್ನತೆಗೊಳಗಾಗಿದ್ದ ಎಂಜಿನಿಯ ರಿಂಗ್‌ ಸ್ನಾತಕೋತ್ತರ ಪದವೀಧರನೊಬ್ಬ (ಎಂಟೆಕ್‌) ತನ್ನ ಸೋದರ ಸಂಬಂಧಿಗೆ ಸ್ಮಶಾನದ ಲೋಕೇಷನ್‌ ಮ್ಯಾಪ್‌ಅನ್ನು ವ್ಯಾಟ್ಸಾಪ್‌ ಮಾಡಿ ಬಳಿಕ ಆ ಸ್ಥದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಕ್ಕೂರಿನಲ್ಲಿ ನಡೆದಿದೆ.

ಇಲ್ಲಿನ ಬಿಇಎಲ್‌ ರಸ್ತೆಯ ನಿವಾಸಿ ಪೆಂಚಾಲ್‌ ಕಿಶೋರ್‌ (24) ಮೃತ ದುರ್ದೈವಿ. ಜೀವನದಲ್ಲಿ ಜಿಗುಪ್ಸೆಗೊಂಡು ಜಕ್ಕೂರು ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಕಿಶೋರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ತನ್ನ ಸಂಬಂಧಿಕನಿಗೆ ಆತ ವಾಟ್ಸಪ್‌ ಸಂದೇಶ ಕಳುಹಿಸಿದ್ದ. ಇದರಿಂದ ಆತಂಕಗೊಂಡ ಮೃತನ ಸಂಬಂಧಿ ಶ್ರೀರಾಮಕಂಠ, ಸ್ಮಶಾನಕ್ಕೆ ಪೊಲೀಸರ ಜತೆ ತೆರಳಿದಾಗ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತ ಪೆಂಚಾಲ್‌ ಕಿಶೋರ್‌ ಮೂಲತಃ ಆಂಧ್ರ ಪ್ರದೇಶವರಾಗಿದ್ದು, 6 ತಿಂಗಳ ಹಿಂದೆ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಎಂಟೆಕ್‌ ಮುಗಿಸಿದ್ದ ಅವರು, ಬಿಇಎಲ್‌ ರಸ್ತೆಯ ಪಿಜಿಯೊಂ ದರಲ್ಲಿ ನೆಲೆಸಿದ್ದರು. ನಗರದ ಹಲವು ಕಂಪನಿಗಳಲ್ಲಿ ಉದ್ಯೋಗಕ್ಕೆ ಪಡೆಯಲು ನಡೆಸಿದ್ದ ಪ್ರಯತ್ನ ಸಫಲ ವಾಗದೆ ಅವರು ನಿರಾಸೆಗೊಂಡಿದ್ದರು. ಇನ್ನು ಕಿಶೋರ್‌ ತಂದೆ ಪೆಂಚಾಲಯ್ಯ ಅವರು ಬ್ರೈನ್‌ ಟ್ಯೂಮರ್‌ ಕಾಯಿಲೆಗೆ ತುತ್ತಾಗಿದ್ದು, ತಂದೆಯ ವೈದ್ಯಕೀಯ ಚಿಕಿತ್ಸೆಯ ಖರ್ಚಿನಿಂದ ಆರ್ಥಿಕ ಸಂಕ ಷ್ಟಕ್ಕೆ ಸಿಲುಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಸೀಮೆಎಣ್ಣೆ ತೆಗೆದು ಕೊಂಡು ಕಿಶೋರ್‌ ಸ್ಮಶಾನಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಐಟಿಪಿಎಲ್‌ನಲ್ಲಿ ಉದ್ಯೋಗದಲ್ಲಿರುವ ತನ್ನ ಸಂಬಂಧಿಕ ಶ್ರೀರಾಮಕಂಠ ಅವರಿಗೆ ಆ ಸ್ಮಶಾನದ ಲೋಕೇಶ್‌ ಜತೆಗೆ ‘ಪ್ಲೀಸ್‌ ಕಲೆಕ್ಟ್ ಮೈ ಬಾಡಿ ಹಿಯರ್‌. ಗುಡ್‌ ಬೈ' ಎಂಬ ಸಂದೇಶವನ್ನು ರವಾನಿ ಸಿದ್ದ. ಈ ಸಂದೇಶ ನೋಡಿದ ಗಾಬರಿಗೊಳಗಾದ ಶ್ರೀರಾಮಕಂಠ, ತಕ್ಷಣವೇ ಕಿಶೋರ್‌ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡು ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಈ ಮಾಹಿತಿ ಪಡೆದ ಹೊಯ್ಸಳ ಸಿಬ್ಬಂದಿ, ಕೂಡಲೇ ಸ್ಮಶಾನಕ್ಕೆ ಹೋಗಿ ಸುಮಾರು ಒಂದು ತಾಸು ಹುಡುಕಾಡಿದರೂ ಕಿಶೋರ್‌ ಪತ್ತೆಯಾಗಿಲ್ಲ.

ಆಗ ಬಹುವಿಸ್ತಾರವಾದ ಸ್ಮಶಾನದ ಮೂಲೆಯೊಂ ದರ ಪೊದೆಯಲ್ಲಿ ಹೊಗೆ ಬರುತ್ತಿದ್ದನ್ನು ಗಮನಿಸಿದ ಪೊಲೀಸರು, ಅಲ್ಲಿಗೆ ತೆರಳಿ ನೋಡಿದಾಗ ಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆ ಸಂದರ್ಭ ದಲ್ಲಿ ಪೊಲೀಸರ ಜತೆಯಲ್ಲಿದ್ದ ಶ್ರೀರಾಮಕಂಠ ಅವರು, ಕಿಶೋರ್‌ ಮೃತದೇಹ ಗುರುತಿಸಿದ್ದಾರೆ.

‘ಕಿಶೋರ್‌ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆ ಸಲುವಾಗಿ ಸಾಕಷ್ಟುಹಣ ಖರ್ಚು ಮಾಡಿದ್ದ ಕಿಶೋರ್‌, ಇದರಿಂದ ಹಣಕಾಸು ಸಮಸ್ಯೆ ಸಿಲುಕಿದ್ದ. ಈ ಕಷ್ಟದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದನು. ಆದರೆ, ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗಲಿಲ್ಲ ಎಂದು ನೊಂದುಕೊಂಡಿದ್ದ. ಪ್ರತಿ ದಿನ ನನಗೆ ಕರೆ ಮಾಡಿ, ಕೆಲಸದ ವಿಚಾರವಾಗಿ ನೋವು ತೋಡಿಕೊಳ್ಳುತ್ತಿದ್ದ. ಆಗೆಲ್ಲಾ ನಾನೇ ಅವನಿಗೆ ಸಮಾ ಧಾನಪಡಿಸಿ ಆತ್ಮಸ್ಥೈರ್ಯ ತುಂಬುತ್ತಿದ್ದೆ. ಕೊನೆಗೆ ಇದೇ ನೋವಿನಲ್ಲೇ ಅವನು ಆತ್ಮಹತ್ಯೆ ತೀರ್ಮಾನಕ್ಕೆ ಬಂದಿರಬಹುದು' ಎಂದು ಶ್ರೀರಾಮಕಂಠ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.