ಮದುವೆ ಸಮಯಕ್ಕೆ ಪಾಸ್‌ಪೋರ್ಟ್ ಕಳೆದುಕೊಂಡಭಾರತಕ್ಕೆ ಬರಲು ಸಹಾಯಕ್ಕಾಗಿ ಸುಷ್ಮಾಗೆ ಟ್ವೀಟ್ವ್ಯಕ್ತಿಯ ಪೇಚಾಟಕ್ಕೆ ಸುಷ್ಮಾ ಹಾಸ್ಯ ಚಟಾಕಿಪಾಸ್‌ಪೋರ್ಟ್ ಕೊಡಿಸೋದಾಗಿ ಭರವಸೆ 

ನವದೆಹಲಿ(ಜು.31): ಮುಂದಿನ ತಿಂಗಳು ತನ್ನ ವಿವಾಹಕ್ಕಾಗಿ ಭಾರತಕ್ಕೆ ಆಗಮಿಸಬೇಕಿದ್ದ ವ್ಯಕ್ತಿಯೊಬ್ಬ ಅಮೆರಿಕಾದಲ್ಲಿ ತನ್ನ ಪಾಸ್‌ಪೋರ್ಟ್ ಕಳೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿವಾಹ ಸಮಯಕ್ಕೆ ಸರಿಯಾಗಿ ಪಾಸ್‌ಪೋರ್ಟ್ ಕೊಡಿಸುವಂತೆ ಟ್ವಿಟ್ಟರ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಸೂಕ್ತವಲ್ಲದ ಸಮಯದಲ್ಲಿ ನೀವು ಪಾಸ್‌ಪೋರ್ಟ್ ಕಳೆದುಕೊಂಡಿದ್ದಿರೀ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆದರೆ ನಿಮ್ಮ ವಿವಾಹ ಸಮಯಗದೊಳಗೆ ನಿಮ್ಮ ಪಾಸ್‌ಪೋರ್ಟ್ ಕೊಡಿಸುವುದಾಗಿ ಸುಷ್ಮಾ ಭರವಸೆ ನೀಡಿದ್ದಾರೆ.

Scroll to load tweet…

ಆಗಸ್ಟ್ 13 ರಿಂದ 15 ರವರೆಗೆ ತಮ್ಮ ವಿವಾಹವಿದ್ದು, ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಪಾಸ್‌ಪೋರ್ಟ್ ಕಳೆದು ಕೊಂಡಿರುವುದಾಗಿ ದೇವತಾ ರವಿ ತೇಜಾ ಎಂಬವರು ಟ್ವೀಟ್ ಮಾಡಿದ್ದರು. ತತ್ಕಾಲ್ ಪಾಸ್‌ಪೋರ್ಟ್ ಮಾಡಿಸಿಕೊಡುವಂತೆ ಸುಷ್ಮಾ ಬಳಿ ಮನವಿ ಮಾಡಿಕೊಂಡಿದ್ದರು. 

ರವಿ ತೇಜಾ ಅವರ ಟ್ವೀಟ್ ಅನ್ನು ವಾಷಿಂಗ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಟ್ವೀಟ್‌ಗೆ ಟ್ಯಾಗ್ ಮಾಡಿರುವ ಸುಷ್ಮಾ ಸ್ವರಾಜ್, ಮಾನವೀಯತೆ ಆಧಾರದ ಮೇಲೆ ಅವರಿಗೆ ಪಾಸ್‌ಪೋರ್ಟ್ ಕೊಡುವಂತೆ ಮನವಿ ಮಾಡಿದ್ದಾರೆ.