ಸ್ಟಾಕ್ 'ಹೋಂ(ಅ.3): ವೈದ್ಯಕೀಯ ಕ್ಷೇತ್ರಕ್ಕೆ ಒಲ್ಲಿದ ಮೊತ್ತೊಂದು ನೊಬೆಲ್ ಗರಿ. ಹೌದು ಜಪಾನಿನ ಜೀವಶಾಸ್ತ್ರಜ್ಞ, ಜೀವಕೋಶ ಅಧ್ಯಯನ ತಜ್ಞ ಯೊಶಿನೊರಿ ಒಶುಮಿ ಅವರು ಕ್ಯಾನ್ಸರ್‌ ಹಾಗೂ ಪಾರ್ಕಿನ್ಸನ್ಸ್‌ ಮುಂತಾದ ಕಾಯಿಲೆಗಳಿಗೆ ಮನುಷ್ಯನ ದೇಹವು ಹೇಗೆ ತುತ್ತಾಗುತ್ತದೆ ಮತ್ತು ಈ ರೋಗಗಳಿಗೆ ಕಾರಣವಾಗುವಲ್ಲಿ ಆತನ ದೇಹದಲ್ಲಿನ ಜೀವಕೋಶಗಳು ಹೇಗೆ ನಾಶವಾಗುತ್ತವೆ ಎಂಬ ಸಂಶೋಧನೆಗೆ 2016ನೇ ಸಾಲಿನ ವೈದ್ಯಕೀಯ ನೊಬೆಲ್‌ ಪಾರಿತೋಷಕ ಪ್ರಶಸ್ತಿಯನ್ನು ಸ್ಟಾಕ್‌ಹೋಮ್‌ನಲ್ಲಿಂದು ಪ್ರಕಟಿಸಿಲಾಯಿತು. ಈ ವರ್ಷದ 273 ವಿಜ್ಞಾನಿಗಳು ವೈದ್ಯಕೀಯದ ನೊಬೆಲ್‌ ಪ್ರಶಸ್ತಿಯ ರೇಸ್ ನಲ್ಲಿದರು.