ಪ್ರಮುಖ ಯಾತ್ರಾ ಕೇಂದ್ರಗಳಾ ದ ಅಯೋಧ್ಯಾ, ಚಿತ್ರ ಕೂಟಧಾಮ, ಮಿಶ್ರಿಖ್‌ ನೈಮಿಶಾರಣ್ಯ, ದೇವ ಶರೀಫ್‌ ಮತ್ತು ದಿಯೋ ಬಂದ್‌ಗಳಲ್ಲಿ ಮದ್ಯಮಾರಾಟ ನಿಷೇಧಿಸಿದ್ದಾರೆ.

ಲಖನೌ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ದ್ದಾರೆ. ಹಾಗಾಗಿ ಹೊಸ ಅಬಕಾರಿ ನೀತಿ ರೂಪಿಸಲು ಅವರು ಆದೇಶಿಸಿದ್ದಾರೆ.

ಪ್ರಮುಖ ಯಾತ್ರಾ ಕೇಂದ್ರಗಳಾದ ಅಯೋಧ್ಯಾ, ಚಿತ್ರ ಕೂಟಧಾಮ, ಮಿಶ್ರಿಖ್‌ ನೈಮಿಶಾರಣ್ಯ, ದೇವ ಶರೀಫ್‌ ಮತ್ತು ದಿಯೋ ಬಂದ್‌ಗಳಲ್ಲಿ ಮದ್ಯಮಾರಾಟ ನಿಷೇಧಿಸಿದ್ದಾರೆ.

ಇದೇ ವೇಳೆ ರಾಜ್ಯದ ಜೈಲುಗಳಲ್ಲಿ ಡಾನ್‌ಗಳು ಮತ್ತು ಸಣ್ಣಪುಟ್ಟಅಪರಾಧ ಕೃತ್ಯವೆಸಗಿದವರಿಗೂ ಒಂದೇ ರೀತಿಯ ಆಹಾರ ಪೂರೈಕೆ ಮಾಡಬೇಕು ಮತ್ತು ಯಾವುದೇ ತಾರತಮ್ಯ ಅನುಸರಿಸದಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ ನೀಡಿದ್ದಾರೆ.