Asianet Suvarna News Asianet Suvarna News

ಪೂಜೆಗೆ 5 ದಿನ ರಜೆ: ಯೋಗಿ ವಿವಾದ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದಸರಾ ನಿಮಿತ್ತ 5 ದಿನಗಳ ಕಾಲ ಗೋರಖ್‌ನಾಥ ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಯೋಗಿ ಅದಿತ್ಯನಾಥ್ ಅವರು ಗೋರಖ್‌'ನಾಥ್ ದೇವಾಲಯದ ಮುಖ್ಯರ್ಚಕರೂ ಆಗಿದ್ದು, ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ರಾಮಲೀಲಾ ಮೈದಾನಕ್ಕೆ ಆಗಮಿಸಿ ದಸರಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Yogi adityanath shobhayatra in ghorakpur

ಗೋರಖ್‌'ಪುರ(ಅ.02): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದಸರಾ ನಿಮಿತ್ತ 5 ದಿನಗಳ ಕಾಲ ಗೋರಖ್‌ನಾಥ ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಯೋಗಿ ಅದಿತ್ಯನಾಥ್ ಅವರು ಗೋರಖ್‌'ನಾಥ್ ದೇವಾಲಯದ ಮುಖ್ಯರ್ಚಕರೂ ಆಗಿದ್ದು, ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ರಾಮಲೀಲಾ ಮೈದಾನಕ್ಕೆ ಆಗಮಿಸಿ ದಸರಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ ಅವರು ದೇವಾಲಯಕ್ಕೆ ಕಾವಿ ಬಟ್ಟೆಯಲ್ಲಿ ಆಗಮಿಸಿ ಪೂಜೆ ಕೈಗೊಂಡಿದ್ದಾರೆ. ಇದೇ ವೇಳೆ, ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯ ಕರ್ತವ್ಯ ಮತ್ತು ದೇವಾಲಯದ ಧಾರ್ಮಿಕ ಕಾರ್ಯವನ್ನು ಏಕ ಕಾಲದಲ್ಲಿ ಕೈಗೊಂಡಿರುವುದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡ ವೇಳೆ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.

 

Latest Videos
Follow Us:
Download App:
  • android
  • ios