Asianet Suvarna News Asianet Suvarna News

ಯೋಗಿ ಆದಿತ್ಯನಾಥ್'ರೊಂದಿಗೆ ಸಂದರ್ಶನ: ನೀವು ಬಂದ್ಮೇಲೆ ಯುಪಿಯಲ್ಲಿ ಏನು ಬದಲಾಗಿದೆ, ಎನ್ ಕೌಂಟರ್ಗಳು ಜಾಸ್ತಿಯಾಗಿದೆಯಂತೆ ?

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಈ ವಾರ ೬ ತಿಂಗಳು ತುಂಬಿದೆ. ಹಿಂದುತ್ವದ ಫೈರ್‌ಬ್ರ್ಯಾಂಡ್ ಆಗಿದ್ದ ಅವರು ಮುಖ್ಯಮಂತ್ರಿಯಾಗಿ ಏನು ಮಾಡುತ್ತಾರೆ ಎಂಬ ಬಗ್ಗೆ ದೇಶಾದ್ಯಂತ ಸಾಕಷ್ಟು ಕುತೂಹಲವಿತ್ತು. ತಮ್ಮ ಕೆಲಸದ ಬಗ್ಗೆ ಉತ್ತರ ಪ್ರದೇಶದ ಈ-ಟೀವಿ ಜೊತೆ ಅವರು ವಿಸ್ತೃತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Yogi Adityanath Interview

1) ನೀವು ಬಂದ ಮೇಲೆ ಯುಪಿಯಲಿ  ಏನು ಬದಲಾಗಿದೆ? ? ಒಬ್ಬ ಸನ್ಯಾಸಿಯಾಗಿದ್ದವರು ರಾತ್ರೋರಾತ್ರಿ ಮುಖ್ಯಮಂತ್ರಿಯಾದಿರಿ. ಆ ಕುರ್ಚಿಗೆ ಬಂದು ಈಗ ಆರು ತಿಂಗಳು ಕಳೆದಿದೆ. ಈ ಬದಲಾವಣೆಯನ್ನು ಹೇಗೆ ನಿಭಾಯಿಸುತ್ತಿದ್ದೀರಿ?

ಯೋ: ನಾನು ಹಿಂದಿನ ಐದು ಅವಧಿಗೆ ಸಂಸದನಾಗಿದ್ದವನು. ಇದು ರಾತ್ರೋರಾತ್ರಿ ಆಗಿದ್ದಲ್ಲ. ಸಂಸದನಾಗಿದ್ದ ಅವಧಿಯಲ್ಲಿ ಜನರ ನಿರೀಕ್ಷೆ ಹಾಗೂ ರಾಜಕಾರಣವನ್ನು ಅರಿತಿದ್ದೇನೆ. ಈಗ ಪ್ರ‘ಾನಿ ಮೋದಿಯವರು ದೇಶದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯವಾದ ಉತ್ತರ ಪ್ರದೇಶದ ಆಡಳಿತವನ್ನು ನನಗೆ ನೀಡಿದ್ದಾರೆ. ವಾಸ್ತವವಾಗಿ ನನಗೆ ಇದೊಂದು ಪರೀಕ್ಷೆ. ಇದರಲ್ಲಿ ಪಾಸಾಗುವುದು ನಾನು ನನ್ನ ಮತದಾರರ ವಿಷಯದಲ್ಲಿ ಹೊಂದಿರುವ ಉತ್ತರದಾಯಿತ್ವ. ಇನ್ನು ಸನ್ಯಾಸಿ ಹಾಗೂ ಮುಖ್ಯಮಂತ್ರಿ ಪದವಿಯ ವ್ಯತ್ಯಾಸ ಕೇಳಿದಿರಿ. ಇದರಲ್ಲಿರುವುದು ಯೋಚನೆಯ ವ್ಯತ್ಯಾಸವಷ್ಟೆ. ಒಬ್ಬ ಸನ್ಯಾಸಿಯ ಬದುಕಿನ ಉದ್ದೇಶವೂ ಲೋಕಕಲ್ಯಾಣ ಹಾಗೂ ರಾಜಕಾರಣಿಯ ಬದುಕಿನ ಉದ್ದೇಶವೂ ಲೋಕಕಲ್ಯಾಣ. ಸ್ವಾತಂತ್ರ್ಯಾನಂತರ ರಾಜಕಾರಣವನ್ನು ಸ್ವಾರ್ಥಕ್ಷೇತ್ರವನ್ನಾಗಿ ಮಾಡಲಾಗಿದೆ. ಹಾಗಾಗಿ ರಾಜಕಾರಣಿಗಳು ಲೋಕಕಲ್ಯಾಣಕ್ಕಿಂತ ಹೆಚ್ಚಾಗಿ ಸ್ವಯಂ ಕಲ್ಯಾಣಕ್ಕೆ ಮಹತ್ವ ನೀಡುತ್ತಿದ್ದಾರೆ. ಇದರಿಂದಾಗಿ ನಿಮಗೆ ವ್ಯತ್ಯಾಸ ಕಾಣಿಸುತ್ತಿರಬಹುದು. ರಾಮಮನೋಹರ ಲೋಹಿಯಾ ಹೇಳಿದಂತೆ, ‘ರ್ಮವೆಂಬುದು ಅಲ್ಪಕಾಲೀನ ರಾಜಕಾರಣ ಮತ್ತು ರಾಜಕಾರಣವೆಂಬುದು ದೀರ್ಘಕಾಲೀನ ‘ರ್ಮ. ಇವೆರಡೂ ಪರಸ್ಪರ ಪೂರಕ ಸಂಗತಿಗಳು. ನಾನು ಈ ಎರಡೂ ಕ್ಷೇತ್ರವನ್ನು ಲೋಕಕಲ್ಯಾಣಕ್ಕೆ ಬಳಸಿಕೊಳ್ಳುತ್ತಿದ್ದೇನೆ.  

2) ಆರು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನೀವು ತಂದ ಅತಿದೊಡ್ಡ ಬದಲಾವಣೆ ಏನು?

ಯೋ: ಈ ಅವಧಿಯಲ್ಲಿ ನಾವು ಜನರ ಮನಸ್ಸಿನಲ್ಲಿ ವಿಶ್ವಾಸ ಮೂಡಿಸಿದ್ದೇವೆ. ಇಂದು ಉತ್ತರ ಪ್ರದೇಶದಲ್ಲಿ ಆಡಳಿತ ವ್ಯವಸ್ಥೆ ಸಂವೇದನಾಶೀಲವಾಗುತ್ತಿದೆ ಎಂಬುದು ಎಲ್ಲರ ಅನು‘ವಕ್ಕೆ ಬಂದಿದೆ. ಹಿಂದೆ ಜಂಗಲ್ ರಾಜ್ ಆಗಿ ಅರಾಜಕತೆಯಿಂದ ನರಳುತ್ತಿದ್ದ ರಾಜ್ಯದಲ್ಲಿ ಇಂದು ಹೊಸ ವಾತಾವರಣ ಮೂಡಿದೆ. ರಾಜ್ಯದ ಯಾವೊಬ್ಬ ವ್ಯಕ್ತಿಯನ್ನು ಕೇಳಿದರೂ ಆತ ಇದನ್ನು ಹೆಮ್ಮೆಯಿಂದ ಹೇಳುತ್ತಾನೆ. ಸರ್ಕಾರ ಇರುವುದು ಜನರನ್ನು ‘ಯಗೊಳಿಸುವುದಕ್ಕಲ್ಲ, ಜನರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಎಂಬ ತತ್ವದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ.

3) ನೀವು ಗೋರಖ್‌ಪುರದವರು. ಈಗ ಲಖ್ನೋದಲ್ಲಿ ಕುಳಿತಿದ್ದೀರಿ. ಗೋರಖ್‌ಪುರದ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮಕ್ಕಳ ಸಾವಿನ ಪ್ರಕರಣ ನಡೆಯಿತು. ಸರ್ಕಾರಕ್ಕೆ ಅದನ್ನು ನಿಯಂತ್ರಿಸಲು ಸಾಕಷ್ಟು ಸಮಯ ಹಿಡಿಯಿತು. ಬೇಸರವಾಗಲಿಲ್ಲವೇ?

ಯೋ: ಗೋರಖ್‌ಪುರದಲ್ಲಿ ಎನ್ಸೆಾಲಿಟೀಸ್‌ನಿಂದ ಮಕ್ಕಳ ಸಾವು ಸಂ‘ವಿಸುವುದು 40 ವರ್ಷಗಳಿಂದ ನಡೆಯುತ್ತಿದೆ. ಬಹಳ ಹಿಂದೆಯೇ ಮೊಟ್ಟಮೊದಲ ಬಾರಿಗೆ ಇದರ ಬಗ್ಗೆ ಸಂಸತ್ತಿನಲ್ಲಿ ಗಮನ ಸೆಳೆದಿದ್ದೇ ನಾನು. ಅದಕ್ಕೂ ಮೊದಲು ಮಾ‘ಧ್ಯಮಗಳಾಗಲೀ, ಸರ್ಕಾರವಾಗಲೀ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ನಾನು ಇದರ ವಿರುದ್ಧ ಹೋರಾಟ ಮಾಡಿದೆ. ಈ ಸಾವು ದುಃಖಕರ ಹಾಗೂ ಇದರಲ್ಲಿ ರಾಜಕೀಯ ನಡೆಸಬಾರದು. ಆದರೆ ಮಾಧ್ಯಮಗಳು ಇದನ್ನು ಬೇಕಂತಲೇ ಅನ್ಯ ರೀತಿಯಲ್ಲಿ ತೋರಿಸಿದವು.

ನಮ್ಮ ಸರ್ಕಾರ ಬಂದ ತಕ್ಷಣ ಎನ್ಸೆಾಲಿಟೀಸ್ ನಿಯಂತ್ರಣಕ್ಕೆ ಮೊದಲ ಬಾರಿ ಸರ್ವೆ ನಡೆಸಿ ಈ ರೋಗ ಹೆಚ್ಚಿರುವ ಸ್ಥಳಗಳಲ್ಲಿ 1ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ, 20 ಅತಿ ಸೂಕ್ಷ್ಮ ಸ್ಥಳಗಳಲ್ಲಿ ಮಕ್ಕಳ ಐಸಿಯು ಸ್ಥಾಪಿಸುವ, ಈ ಭಾಗದ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಎನ್ಸೆಾಲಿಟೀಸ್ ನಿಯಂತ್ರಣಕ್ಕೆ ತರಬೇತಿ ನೀಡುವ, ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಎನ್ಸೆಾಲಿಟೀಸ್ ಚಿಕಿತ್ಸೆಗೆ ವಿಶೇಷ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸುವ ಕೆಲಸ ಮಾಡಿದ್ದೆವು. ಇದೆಲ್ಲದರ ಪರಿಣಾಮ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವರ್ಷ ಎನ್ಸೆಾಲಿಟೀಸ್‌ನಿಂದ ಸಂ‘ವಿಸುವ ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇದ್ಯಾವುದನ್ನೂ ತೋರಿಸದ ಮಾಧ್ಯಮಗಳು ಗೋರಖ್‌ಪುರದ ಪ್ರಕರಣವನ್ನು ಆಮ್ಲಜನಕ ಪೂರೈಕೆಯೊಂದಿಗೆ ಜೋಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದವು.

ಇದರಿಂದ ಆಗಿದ್ದೇನು? ಡಾಕ್ಟರ್‌ಗಳು ಚಿಕಿತ್ಸೆ ನೀಡುವುದಕ್ಕೆ ಹೆದರುತ್ತಿದ್ದಾರೆ ಮತ್ತು ಜನರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಹೆದರುತ್ತಿದ್ದಾರೆ. ಎನ್ಸೆಾಲಿಟೀಸ್ ವಿರುದ್ಧದ ಆಂದೋಲನವನ್ನು ನಾವು ಸ್ವಚ್ಛ‘ಾರತ ಅಭಿಯಾನದ ಜೊತೆ ಜೋಡಿಸಿ ಹೋರಾಡುತ್ತಿದ್ದೇವೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ. ನೈರ್ಮಲ್ಯದ ಕೊರತೆಯಿಂದ ಈ ರೋಗ ಬರುತ್ತದೆ. ಜನರು ಎಚ್ಚೆತ್ತರೆ ಇದನ್ನು ಸಂಪೂರ್ಣ ನಿರ್ನಾಮ ಮಾಡಬಹುದು. ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ.

4) ಉತ್ತರ ಪ್ರದೇಶದ ಆಡಳಿತ ಯಾವ ಮಟ್ಟದಲ್ಲಿದೆ ಎಂಬುದು ನಿಮಗೀಗ ಸರಿಯಾಗಿ ಗೊತ್ತಾಗಿದೆ. ದೇಶದ ಸರಾಸರಿಗೆ ಹೋಲಿಸಿದೆ ಇಲ್ಲಿನ ವ್ಯವಸ್ಥೆ ಎಷ್ಟು ಹಿಂದಿದೆ ಮತ್ತು ನೀವದನ್ನು ಯಾವ ಮಟ್ಟಕ್ಕೆ ಏರಿಸುತ್ತೀರಿ?

ಯೋ: ಸ್ವಾತಂತ್ರ್ಯ ಬಂದ ಸಮಯದಲ್ಲಿ ಉತ್ತರ ಪ್ರದೇಶ ಈ ದೇಶದ ನಂ.1 ರಾಜ್ಯವಾಗಿತ್ತು. ಇಂದು ಕೊನೆಯಿಂದ 3ನೇ ಸ್ಥಾನದಲ್ಲಿದೆ! ಜಾತಿವಾದ, ವಂಶಪಾರಂಪರ್ಯ  ಆಡಳಿತ ಹಾಗೂ ಧಾರ್ಮಿಕ ತುಷ್ಟೀಕರಣದಿಂದಾಗಿ ರಾಜ್ಯ ಹಿಂದುಳಿದಿದೆ. ಇದನ್ನು ಸರಿಪಡಿಸುವುದಕ್ಕೆಂದೇ ಜನರು ನಮಗೆ ಅಭೂತ ಬಹುಮತ ನೀಡಿದ್ದಾರೆ. ಅವರ ನಿರೀಕ್ಷೆ ಹುಸಿಪಡಿಸುವುದಿಲ್ಲ. ಈಗಾಗಲೇ ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ನಾವು ಸಾಕಷ್ಟು ಸು‘ಾರಿಸಿದ್ದೇವೆ. ಅಕ್ರಮ ಮಾಫಿಯಾಗಳು ಬಹುತೇಕ ಬಂದ್ ಆಗಿವೆ. ಪೊಲೀಸರು ತಾವು ಮಾಡಬೇಕಾದ ಕೆಲಸ ಮಾಡುತ್ತಿದ್ದಾರೆ.

5) ಉತ್ತರ ಪ್ರದೇಶದಲ್ಲೀಗ ಕಾನೂನು ಸುವ್ಯವಸ್ಥೆ ನಿಜವಾಗಿಯೂ ಸು‘ಧಾರಿಸಿದೆ ಎಂದು ನಿಮಗೆ ಅನ್ನಿಸುತ್ತಿದೆಯಾ?

ಯೋ:  ಖಂಡಿತ ಸುಧಾರಿಸಿದೆ. ರೌಡಿಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಎಸಗುವವರು ರಾಜ್ಯ ಬಿಟ್ಟು ಓಡುತ್ತಿದ್ದಾರೆ ಅಥವಾ ಪೊಲೀಸರಿಗೆ ಶರಣಾಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಒಂದೇ ಒಂದು ದಂಗೆ ನಡೆದಿಲ್ಲ. ಕಳೆದ ಐದು ವರ್ಷದಲ್ಲಿ 450 ದಂಗೆಗಳು ನಡೆದಿದ್ದವು! ಅಂತಹ ರಾಜ್ಯದಲ್ಲಿ ಈ ಮಟ್ಟಿಗಿನ ಸು‘ಧಾರಣೆ ನಿರೀಕ್ಷಿಸಲು ಸಾಧ್ಯವಿತ್ತೇ? ಸಹರಣ್‌ಪುರದಲ್ಲಿ ಸಣ್ಣ ಘರ್ಷಣೆ ನಡೆದಿತ್ತು. ಅದನ್ನು ಆ ಕ್ಷಣವೇ ನಿಯಂತ್ರಿಸಲಾಯಿತು.

6) ಪೊಲೀಸರು ಸುಧಾರಿಸಿದ್ದಾರೆ ಎನ್ನುತ್ತೀರಿ. ಎನ್ ಕೌಂಟರ್‌ಗಳು ಹೆಚ್ಚಿರುವುದು ಅದೇ ಕಾರಣದಿಂದಲೇ?

ಯೋ: ಕಾನೂನನ್ನು ಗೌರವಿಸುವವರನ್ನು ನೀವೂ ಗೌರವಿಸಿ, ಕಾನೂನನ್ನು ಧಿಕ್ಕರಿಸುವವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಿ ಎಂದು ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಕಳೆದ 15 ವರ್ಷಗಳ ಗೂಂಡಾರಾಜ್ಯವನ್ನು ಸ್ವಚ್ಛಗೊಳಿಸಲು ಈ ಕಾಠಿಣ್ಯ ಅತ್ಯಗತ್ಯ. ಬಡವರನ್ನು ಶೋಷಿಸುವ, ಹುಡುಗಿಯರನ್ನು ಅಪಹರಿಸುವ, ವ್ಯಾಪಾರಿಗಳನ್ನು ಸುಲಿಗೆ ಮಾಡುವ, ಪೊಲೀಸರ ಮೇಲೆ ಗುಂಡು ಹಾರಿಸುವ ವ್ಯಕ್ತಿಗಳನ್ನು ಸುಮ್ಮನೆ ಬಿಡಬೇಕೆ? ಗುಂಡು ಹಾರಿಸುವವರ ಮೇಲೆ ಗುಂಡೇ ಹಾರಿಸಬೇಕು. ಇದರಲ್ಲಿ ಅನುಮಾನವೇ ಬೇಡ. ಪೊಲೀಸರಿಂದಾಗಿಯೇ ಇಂದು ಜನರಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡುತ್ತಿದೆ. ನಾನು ಅವರಿಗೆ ಶಹಬ್ಬಾಸ್ ಹೇಳಿದ್ದೇನೆ.

7) ನೀವು 16ರಿಂದ 18 ತಾಸು ಕೆಲಸ ಮಾಡುತ್ತಿದ್ದೀರಂತೆ. ಆದರೆ, ಅಧಿಕಾರಿಗಳು ಹಾಗೂ ಮಂತ್ರಿಮಂಡಲ ನಿಮ್ಮ ವೇಗಕ್ಕೆ ಕೆಲಸ ಮಾಡುತ್ತಿದೆಯೇ?

ಯೋ: ಈಗ ನೀವು ನೋಡುತ್ತಿರುವ ಸುಧಾರಣೆಯ ಹಿಂದೆ ಅವರೆಲ್ಲರ ಪರಿಶ್ರಮವಿದೆ. ನಾನೊಬ್ಬನೇ ಎಲ್ಲವನ್ನೂ ಮಾಡಲು ಸಾಧ್ಯವೇ? ಎಲ್ಲರೂ ನನ್ನ ಜೊತೆ ಕೈಜೋಡಿಸಿದ್ದಾರೆ.

8) ದಿನವಿಡೀ ಕೆಲಸ ಮಾಡುವ ನಿಮಗೆ ಬಿಡುವಿನ ಸಮಯ ಸಿಕ್ಕಾಗ ಏನು ಮಾಡುತ್ತೀರಿ? ನನ್ನ ಬಳಿ ಬಿಡುವಿನ ಸಮಯವೇ ಇಲ್ಲ. ಒಬ್ಬ ಯೋಗಿಗೆ ಖಾಲಿ ಸಮಯ ಸಿಗುತ್ತದೆಯೇ?

ಯೋ: ಸಮಯ ಸಿಕ್ಕಾಗಲೆಲ್ಲ ಜಪಮಾಲೆ ಹಿಡಿಯುತ್ತೇನೆ, ಸ್ವಾಧ್ವಾಯದಲ್ಲಿ ತೊಡಗುತ್ತೇನೆ. ಸದ್ಯಕ್ಕೆ ಇದ್ಯಾವುದಕ್ಕೂ ಸಮಯ ಸಿಗುತ್ತಿಲ್ಲ. ರಾಜ್ಯದಲ್ಲಿ ಸರಿಪಡಿಸಬೇಕಾದ ಸಂಗತಿಗಳ ದೊಡ್ಡ ರಾಶಿಯೇ ನನ್ನ ಮುಂದಿದೆ. ಇವುಗಳನ್ನು ಸರಿಪಡಿಸಲು ಬೆಳಿಗ್ಗೆ ಏಳು ಗಂಟೆಯಿಂದ ಆರಂಭಿಸಿ ರಾತ್ರಿ 11, 12 ಗಂಟೆಗಳವರೆಗೆ ಸಭೆ ನಡೆಸುತ್ತಿರುತ್ತೇನೆ. ಮುಖ್ಯಮಂತ್ರಿಯಾಗಿರುವವರೆಗೆ ನಾನು ದಿನದ ಇಪ್ಪತ್ತನಾಲ್ಕು ಗಂಟೆಯೂ ಮುಖ್ಯಮಂತ್ರಿಯಾಗಿಯೇ ಇರುತ್ತೇನೆ.

(ಕನ್ನಡಪ್ರಭ)

Latest Videos
Follow Us:
Download App:
  • android
  • ios