ಮೊಬೈಲ್ ಬಳಕೆಗೆ ನಿಷೇಧ ಹೇರಿ ಸಿಎಂ ಆದೇಶ ನೀಡಿದ್ದಾರೆ. ಎಲ್ಲಿ ನಿಷೇಧ..?

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ತಮ್ಮ ಸಂಪುಟ ಸಭೆ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಸಭೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವರು ಮತ್ತು ಅಧಿಕಾರಿಗಳು ಮಹತ್ವದ ವಿಚಾರಗಳ ಚರ್ಚೆ ವೇಳೆಯೂ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಾರೆ. ಚರ್ಚೆಯ ವಿಷಯಕ್ಕೆ ಮೊಬೈಲ್ ಬಳಕೆಯಿಂದಾಗಿ ಆದ್ಯತೆ ಸಿಗುತ್ತಿಲ್ಲ. 

ಈ ಹಿನ್ನೆಲೆಯಲ್ಲಿ ಸಿಎಂ ಯೋಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಸಚಿವರಿಗೆ ಸೈಲೆಂಟ್ ಮೋಡ್‌ನಲ್ಲಿ ಇರಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಯಶಸ್ವಿ ಆಗದ ಹಿನ್ನೆಲೆ ಯಲ್ಲಿ ಮೊಬೈಲ್‌ಗೆ ನಿಷೇಧ ಹೇರಲಾಗಿದೆ.