ಅನೇಕ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಯೋಗೀಶ್ ಮಾಸ್ಟರ್ ಈಗ ಮತ್ತೊಂದು ವಿವಾದದಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ  ಮನೆಯಲ್ಲೇ ಸೆಕ್ಸ್ ಕುರಿತಾದ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರು (ನ.24): ಅನೇಕ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಯೋಗೀಶ್ ಮಾಸ್ಟರ್ ಈಗ ಮತ್ತೊಂದು ವಿವಾದದಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಮಕ್ಕಳಿಗೆ ಮನೆಯಲ್ಲೇ ಸೆಕ್ಸ್ ಕುರಿತಾದ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದಾರೆ.

ದೇಹದ ಅಂಗಾಂಗಳಿದ ಹಿಡಿದು, ಲೈಂಗಿಕ ಕ್ರಿಯೆ ಹೇಗೆ ಮಾಡುವುದು ಎಂಬ ಎಲ್ಲಾ ಮಾಹಿತಿಯನ್ನು ಮನೆಯಲ್ಲೆ ಮಕ್ಕಳಿಗೆ ನೀಡುತ್ತಿದ್ದಾರೆ. ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಯೋಗೇಶ್ ಮಾಸ್ಟರ್ ಮನೆಯಲ್ಲೆ ಲೈಂಗಿಕ ಶಿಕ್ಷಣ ಕೊಡುತ್ತಿದ್ದಾರೆ. ಮಕ್ಕಳು ಸಹ ಲೈಂಗಿಕತೆ ಬಗ್ಗೆ ನಿರ್ಬಿಡೆಯಿಂದ ಮಾತನಾಡುವ ಮಟ್ಟಕ್ಕೆ ಲೈಂಗಿಕ ಶಿಕ್ಷಣವನ್ನು ಕರಗತ ಮಾಡಿಕೊಂಡಿದ್ದಾರೆ.ಆದರೆ ಈ ಪ್ರಯತ್ನ ಕೂಡ ಇದೀಗ ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಕೇವಲ ಶಾಲೆಗೆ ಸೀಮಿತವಾಗಬೇಕಿದ್ದ ಲೈಂಗಿಕ ಶಿಕ್ಷಣವನ್ನು ಮನೆಯವರೆಗೂ ವಿಸ್ತರಿಸಿದ್ದು ಸರಿನಾ? ಅಷ್ಟು ಮುಕ್ತವಾಗಿ ಮಕ್ಕಳು ಸೆಕ್ಸ್ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.