Asianet Suvarna News Asianet Suvarna News

ಮಲ್ಯ ಕೇಸಿನಲ್ಲಿ ಏಮಾರಿದೆವು: ಸಿಬಿಐ

ಸಾವಿರಾರು ಕೋಟಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಕರೆ ತರಲು ಇದೀಗ ಭಾರತ ಶತಾಯ ಗತಾಯ ಯತ್ನಿಸುತ್ತಿದ್ದೆ. ಇದೇ ಸಂದರ್ಭದಲ್ಲಿ ಎಡವಿದ್ದೆಲ್ಲಿ ಎಂಬುದನ್ನು ಸಿಬಿಐ ಸಹ ಆತ್ಮಾವಲೋಕನ ಮಾಡಿ ಕೊಂಡಿದೆ.

Yes it was an errors says CBI on fugitive businessman Vijay Mallya
Author
Bengaluru, First Published Sep 15, 2018, 10:19 AM IST

ನವದೆಹಲಿ: ವಿಜಯ್ ಮಲ್ಯ ಅವರನ್ನು ಅವರು ವಿದೇಶಕ್ಕೆ ಹಾರುವ 6 ತಿಂಗಳು ಮೊದಲೇ ವಶಕ್ಕೆ ಪಡೆಯಲು ಅವಕಾಶ ಸಿಬಿಐಗೆ ಒದಗಿಬಂದಿತ್ತು. ಅದನ್ನು ತಿರಸ್ಕರಿಸುವ ಮೂಲಕ ಸಿಬಿಐ ಏಮಾರಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಇದನ್ನು ಸ್ವತಃ ಸಿಬಿಐ ಒಪ್ಪಿಕೊಂಡಿದೆ.

2015ರ ಅಕ್ಟೋಬರ್ 12ರಂದು ಮಲ್ಯ ವಿರುದ್ಧ ಸಿಬಿಐ ಮೊದಲ ಬಾರಿಗೆ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು. ಆಗ ಮಲ್ಯ ಅವರು ವಿದೇಶದಲ್ಲಿದ್ದರು. ಅವರು ಭಾರತಕ್ಕೆ ಮರಳುತ್ತಿದ್ದಾಗ ವಲಸೆ ದಳವು ಲುಕ್‌ಔಟ್ ನೋಟಿಸ್‌ನಲ್ಲಿ ಸೂಚಿಸಿರುವಂತೆ ಮಲ್ಯ ಅವರನ್ನು ವಶಕ್ಕೆ ಪಡೆಯಬೇಕೇನು ಎಂದು ಸಿಬಿಐ ಅನ್ನು ಕೇಳಿತ್ತು. ಮಲ್ಯ ಹಾಲಿ ಸಂಸದರಾಗಿದ್ದುದರಿಂದ ಹಾಗೂ ಅವರ ವಿರುದ್ಧ ವಾರಂಟ್ ಕೂಡ ಜಾರಿ ಆಗಿಲ್ಲದಿದ್ದುದರಿಂದ ಮತ್ತು ತನಿಖೆಗೆ ಅವರು ಸಹಕಾರ ನೀಡುತ್ತಿದ್ದುದರಿಂದ ವಶಕ್ಕೆ ಪಡೆಯಬೇಕಾಗಿಲ್ಲ, ಅವರ ಚಲನವಲನದ ಬಗ್ಗೆ ಮಾಹಿತಿ ನೀಡಿದರಷ್ಟೇ ಸಾಕು ಎಂದು ಸಿಬಿಐ ಹೇಳಿತ್ತು.

ಮಲ್ಯ ಪರಾರಿಗೆ ಮೋದಿ ಶ್ರೀ ರಕ್ಷೆ

2015ರ ನವೆಂಬರ್‌ನಲ್ಲಿ ಲುಕ್‌ಔಟ್ ನೋಟಿಸ್‌ನಲ್ಲಿ ಬದಲಾವಣೆ ಮಾಡಿ ಮಲ್ಯ ಕುರಿತು ಮಾಹಿತಿ ನೀಡುವಂತೆ ಮಾತ್ರವೇ ಸಿಬಿಐ ಸೂಚಿಸಿತ್ತು. 2013ರ ಅಕ್ಟೋಬರ್‌ನಲ್ಲಿ ವಿದೇಶಕ್ಕೆ ತೆರಳಿ ನವೆಂಬರ್‌ನಲ್ಲಿ ವಾಪಸಾಗಿದ್ದ ಮಲ್ಯ, ಡಿಸೆಂಬರ್ ಮೊದಲ ಹಾಗೂ ಕೊನೆಯ ವಾರ ಹಾಗೂ 2016ರ ಜನವರಿಯಲ್ಲಿ ವಿದೇಶ ಯಾತ್ರೆ ಮಾಡಿದ್ದರು. 21016ರ ಮಾ.2ರಂದು ವಿದೇಶಕ್ಕೆ ಹಾರಿದವರು ಮತ್ತೆ ಬರಲೇ ಇಲ್ಲ.

Follow Us:
Download App:
  • android
  • ios