ಸರ್ಕಾರದ ಕ್ರಮವು ಅರಾಜಕತೆಯನ್ನುಂಟುಮಾಡಿದೆ ಎಂದ ಯೆಚೂರಿ, 500 ಮತ್ತು 1000ದ ನೊಟುಗಳನ್ನು ನಿಷೇಧಿಸುವುದರಿಂದ ಭ್ರಷ್ಟಚಾರವು ಕಡಿಮೆಯಾಗುವುದಿಲ್ಲ, ಬದಲಾಗಿ ಇಮ್ಮಡಿಗೊಳ್ಳಲಿದೆ ಎಂದು ಯೆಚೂರಿ ಅಭಿಪ್ರಾಯ ಪಟ್ಟಿದ್ದಾರೆ.

ನವದೆಹಲಿ (ನ.16): ಕೇಂದ್ರ ಸರ್ಕಾರದ ನೋಟು ಅಪಮೌಲ್ಯೀಕರಣ ಕ್ರಮದ ವಿರುದ್ಧ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಸೀತರಾಮ್ ಯೆಚೂರಿ ಇಂದು ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೋಟು ಅಪಮೌಲ್ಯೀಕರಣ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಯೆಚೂರಿ, ಜನರ ವೈಯುಕ್ತಿಕ ಜೀವನಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ಕ್ರಮವು ಫ್ಯಾಸಿಸ್ಟ್ ಧೋರಣೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಸರ್ಕಾರದ ಕ್ರಮವು ಅರಾಜಕತೆಯನ್ನುಂಟುಮಾಡಿದೆ ಎಂದ ಯೆಚೂರಿ, 500 ಮತ್ತು 1000ದ ನೊಟುಗಳನ್ನು ನಿಷೇಧಿಸುವುದರಿಂದ ಭ್ರಷ್ಟಚಾರವು ಕಡಿಮೆಯಾಗುವುದಿಲ್ಲ, ಬದಲಾಗಿ ಇಮ್ಮಡಿಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪ್ರಕಾಶಿಸುತ್ತಿರುವ’ ಭಾರತದವರಿಗೆ ಪೇಟಿಎಮ್’ನಂತಹ ಆಯ್ಕೆಗಳಿವೆ, ‘ಕಂಗಾಲು’ ಭಾರತಕ್ಕೆ ಯಾವ ಆಯ್ಕೆಗಳಿವೆ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

ಸರ್ಕಾರದ ಕ್ರಮದಿಂದ ಈಗಾಗಲೇ ಹಲವರು ಜೀವ ಕಳೆದುಕೊಂಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಹಣ ಸಿಗದೇ ನರಳುತ್ತಿದ್ದಾರೆ ಎಂದು ಯೆಚೂರಿ ಕಿಡಿ ಕಾರಿದ್ದಾರೆ.