Asianet Suvarna News Asianet Suvarna News

ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾರಿಂದ ‘ರಾಷ್ಟ್ರ ಮಂಚ್’ ಸ್ಥಾಪನೆ

  • ದೇಶದ ಇಂದಿನ ಪರಿಸ್ಥಿತಿ 70 ವರ್ಷಗಳ ಹಿಂದೆ ಗಾಂಧೀಜಿಯ ಹತ್ಯೆಯಾದ ಪರಿಸ್ಥಿತಿಯಂತಿದೆ
  • ಪ್ರಜಾಪ್ರಭುತ್ವ ಹಾಗೂ ಅದರ ಅಧೀನ ಸಂಸ್ಥೆಗಳು ಅಪಾಯದಲ್ಲಿವೆ
  • ಮೋದಿ ಸರ್ಕಾರವು ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ,
  • ತನ್ನ ಹಿತಾಸಕ್ತಿ ಕಾಪಡಾಲು ಬೇಕಾಗುವಂತೆ ಅಂಕಿ-ಅಂಶಗಳನ್ನು ‘ಆರ್ಡರ್’ ಮಾಡಿ ಸಿದ್ಧಪಡಿಸಿಕೊಳ್ಳುತ್ತಿದೆ
Yashwant Sinha Launches Rashtra Manch

ನವದೆಹಲಿ: ಬಿಜೆಪಿ ಹಾಗೂ ಅದರ ನೀತಿಗಳನ್ನು ಟೀಕಿಸುತ್ತಿದ್ದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಹೊಸ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ನೂತನ ಸಂಘಟನೆಗೆ  ‘ರಾಷ್ಟ್ರ ಮಂಚ್’ ಎಂಬ ಹೆಸರನ್ನಿಡಲಾಗಿದ್ದು, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕೂಡಾ ಅದಕ್ಕೆ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಅದರ ಜನವಿರೋಧಿ ನೀತಿಗಳ ವಿರುದ್ಧ ಚಳುವಳಿ ನಡೆಸುವುದಾಗಿ ಯಶವಂತ್ ಸಿನ್ಹಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ದೇಶದ ಇಂದಿನ ಪರಿಸ್ಥಿತಿಯನ್ನು 70 ವರ್ಷಗಳ ಹಿಂದೆ ಗಾಂಧೀಜಿಯ ಹತ್ಯೆಯಾದ ಪರಿಸ್ಥಿತಿಗೆ ಹೋಲಿಸಿದ ಯಶವಂತ್ ಸಿನ್ಹಾ,  ಪ್ರಜಾಪ್ರಭುತ್ವ ಹಾಗೂ ಅದರ ಅಧೀನ ಸಂಸ್ಥೆಗಳು ಅಪಾಯದಲ್ಲಿವೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರವು ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ, ಹಾಗೂ ತನ್ನ ಹಿತಾಸಕ್ತಿ ಕಾಪಡಾಲು ಬೇಕಾಗುವಂತೆ ಅಂಕಿ-ಅಂಶಗಳನ್ನು ‘ಆರ್ಡರ್’ ಮಾಡಿ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ‘ರಾಷ್ಟ್ರ ಮಂಚ್’ ಚಳುವಳಿ ನಡೆಸುವುದು, ಎಂದು ಅವರು ಹೇಳಿದ್ದಾರೆ.

ಬಿಜೆಪಿಯಲ್ಲಿ ಪ್ರತಿಯೊಬ್ಬರು ಭಯಭೀತರಾಗಿದ್ದಾರೆ. ದೇಶದಲ್ಲಿ ಚರ್ಚೆ ಹಾಗೂ ಸಂವಾದ ಗಳು ಏಕಮುಖವಾಗಿದೆ; ಪುಂಡರಗುಂಪುಗಳಿಗೆ ನ್ಯಾಯದಾನದ ಕೆಲಸ ನೀಡಿದಂತನಿಸುತ್ತಿದೆ, ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios