ಕೇಂದ್ರ ಸರ್ಕಾರದ ತಪ್ಪು ನೀತಿಗಳ ಪರಿಣಾಮ ದೇಶದ ಆರ್ಥಿಕತೆ ಪ್ರಪಾತದ ಹಾದಿ ಹಿಡಿದಿದೆ ಎಂದು ವಿವಾದ  ಹುಟ್ಟು ಹಾಕಿದ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ಇಂದು ಇನ್ನು ಮುಂದುವರೆದು ನಾವು ಆರ್ಥಿಕತೆ ಕುಸಿತಕ್ಕೆ ನಾವು ಯುಪಿಎ ಸರ್ಕಾರವನ್ನು ನಿಂದಿಸಲು ಸಾಧ್ಯವಿಲ್ಲ. ಅವರಷ್ಟೇ ನಮಗೂ ಅವಕಾಶ ಸಿಕ್ಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.

ನವದೆಹಲಿ (ಸೆ.28): ಕೇಂದ್ರ ಸರ್ಕಾರದ ತಪ್ಪು ನೀತಿಗಳ ಪರಿಣಾಮ ದೇಶದ ಆರ್ಥಿಕತೆ ಪ್ರಪಾತದ ಹಾದಿ ಹಿಡಿದಿದೆ ಎಂದು ವಿವಾದ ಹುಟ್ಟು ಹಾಕಿದ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ಇಂದು ಇನ್ನು ಮುಂದುವರೆದು ನಾವು ಆರ್ಥಿಕತೆ ಕುಸಿತಕ್ಕೆ ನಾವು ಯುಪಿಎ ಸರ್ಕಾರವನ್ನು ನಿಂದಿಸಲು ಸಾಧ್ಯವಿಲ್ಲ. ಅವರಷ್ಟೇ ನಮಗೂ ಅವಕಾಶ ಸಿಕ್ಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.

ಮೋದಿ ಸರ್ಕಾರದ ನೀತಿಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಪಾತಾಳಕ್ಕೆ ಇಳಿದಿದೆ. ಇದೇ ಸಂದರ್ಭದಲ್ಲಿ ಆರ್ಥಿಕತೆಯನ್ನು ಅವ್ಯವಸ್ಥೆ ಮಾಡಿದ್ದಾರೆಂದು ವಿತ್ತ ಸಚಿವ ಅರುಣ್ ಜೇಟ್ಲಿಯ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಬಡತನವನ್ನು ಬಹಳ ಹತ್ತಿರದಿಂದ ನೋಡಿದ್ದೇನೆಂದು ಹೇಳುತ್ತಾರೆ. ಭಾರತೀಯರು ಅದನ್ನು ಇನ್ನೂ ಹತ್ತಿರದಿಂದ ನೋಡುವಂತೆ ಅವರ ವಿತ್ತ ಸಚಿವರು ಇನ್ನಷ್ಟು ಕೆಲಸ ಮಾಡಿದ್ದಾರೆ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ. ಯಶವಂತ್ ಸಿನ್ಹಾ ಸತ್ಯವನ್ನೇ ಹೇಳಿದ್ದಾರೆಂದು ಚಿದಂಬರಂ ಶ್ಲಾಘಿಸಿದ್ದಾರೆ.