ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ ಹೊಂದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ ಹೊಂದಿದ್ದಾರೆ.
ಬೆಂಗಳೂರು (ಅ.03): ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ ಹೊಂದಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ ಆಸ್ಪತ್ರೆಯಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ ಹೊಂದಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಚಿಟ್ಟಾಣಿ ರಾಮಚಂದ್ರ ಹೆಗಡೆ ಜನವರಿ 1, 1933ರಲ್ಲಿ ಜನಿಸಿದರು. ತಮ್ಮ 7ನೇ ವರ್ಷದಲ್ಲಿಯೇ ಯಕ್ಷಗಾನದಲ್ಲಿ ನಟಿಸಲು ಆರಂಭ ಮಾಡಿದರು. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆಬಿಟ್ಟ ರಾಮಚಂದ್ರ ಹೆಗಡೆ ಕೇವಲ 14ನೇ ವರ್ಷಕ್ಕೇ ಪ್ರಮುಖ ಪಾತ್ರಗಳನ್ನ ನಿರ್ವಹಿಸುತ್ತಿದ್ದರು.
ಯಕ್ಷಗಾನದ ಬಡಗುತಿಟ್ಟು ಶೈಲಿಯ ಮೇರು ಕಲಾವಿದರು ಇವರು. ಕೌರವ, ದುಷ್ಟಬುದ್ದಿ, ಭಸ್ಮಾಸುರ, ಕೀಚಕ, ಮಾಗದ, ಕರ್ಣ, ರುದ್ರಕೋಪ, ಕಂಸನ ಪಾತ್ರಗಳಲ್ಲಿ ಇವರ ನಟನೆ ಹೆಸರು ಮಾಡಿತ್ತು.
‘ಚಿಟ್ಟಾಣಿ ಘರಾಣಾ’ ಎಂದೇ ರಾಮಚಂದ್ರ ಹೆಗಡೆ ಶೈಲಿ ಹೆಸರುವಾಸಿಯಾಗಿತ್ತು. ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಯಕ್ಷಗಾನ ಕಲಾವಿದ ಇವರು. ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಬಡಗುತಿಟ್ಟು ಶೈಲಿಯಲ್ಲಿ ನವರಸಗಳನ್ನೂ ಹೊರಹೊಮ್ಮಿಸುತ್ತಿದ್ದರು. ಓರ್ವ ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
