ಅಭಿವೃದ್ಧಿ ಕಾರ್ಯದ ಹಣವನ್ನ ಲೂಟಿ ಮಾಡಿ ಹೈಕಮಾಂಡ್`ಗೆ ಹಂಚಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನ ಬುಡಕ್ಕೂ ಬರುತ್ತೆ, ನಾನು ಶಾಸ್ತ್ರ ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು(ಡಿ.20): ಎರಡ್ಮೂರು ದಿನಗಳಲ್ಲಿ ರಾಜ್ಯ ಸರ್ಕಾರದ 3 ಸಚಿವರ ಬಣ್ಣ ಬಯಲಾಗಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರೊಬ್ಬರು ರಾಜ್ಯಕ್ಕೆ ಬರಬೇಕಾದ ಅಭಿವೃದ್ಧಿ ಕಾರ್ಯದ ಹಣವನ್ನ ಲೂಟಿ ಮಾಡಿ ಹೈಕಮಾಂಡ್`ಗೆ ಹಂಚಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನ ಬುಡಕ್ಕೂ ಬರುತ್ತೆ, ನಾನು ಶಾಸ್ತ್ರ ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದೇವೇಳೆ, ಸಚಿವ ಎಚ್.ಎಸ್. ಮಹದೇವಪ್ಪ ವರ ಪುತ್ರ ಸುನಿಲ್ ಬೋಸ್, ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಯಾಕೆ ಎಂಬುದನ್ನ ಎರಡ್ಮೂರು ದಿನಗಳಲ್ಲಿ ಕಾದು ನೋಡಿ ಎಂದು ಬಿಎಸ್`ವೈ ಹೇಳಿದ್ದಾರೆ.