36 ವರ್ಷದ ಎಮನ್'ಗೆ ನಿತ್ಯ 200 ಗ್ರಾಂ ಪ್ರೋಟೀನ್ ಒಳಗೊಂಡು 1800 ಕ್ಯಾಲೋರಿ ಆಹಾರ ನೀಡಲಾಗುತ್ತಿದೆ.
ಮುಂಬೈ(ಮಾ.19): ವಿಶ್ವದ ಅತೀ ಹೆಚ್ಚು ತೂಕವಿದ್ದ ಮಹಿಳೆ ಈಜಿಪ್ಟಿನ ಎಮನ್ಅಹ್ಮದ್ ಎಬಿಡಿ ದಿನದಿಂದ ದಿನಕ್ಕೆ ಸಣ್ಣಗಾಗುತ್ತಿದ್ದಾಳೆ.
ಮುಂಬೈನ ಶೈಫಿ ಆಸ್ಪತ್ರೆಯಲ್ಲಿ ಫೆ.11 ರಂದು ಶಸ್ತ್ರಚಿಕಿತ್ಸೆ ಆರಂಭಿಸಿದಾಗ ಈಕೆಯ ತೂಕ 500ಕೆಜಿಯಷ್ಟಿತ್ತು. ಈಗ 5 ವಾರದ ನಂತರ 140 ಕೆಜಿ ಸಣ್ಣಗಾಗಿದ್ದಾಳೆ. ಈಗ ಅವಳ ತೂಕ 350 ಕೆಜಿಯಿದೆ.ಇನ್ನು ಒಂದು ತಿಂಗಳಲ್ಲಿ ಇನ್ನು 30 ಕೆಜಿ ಕಡಿಮೆಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.36 ವರ್ಷದ ಎಮನ್'ಗೆ ನಿತ್ಯ 200 ಗ್ರಾಂ ಪ್ರೋಟೀನ್ ಒಳಗೊಂಡು 1800 ಕ್ಯಾಲೋರಿ ಆಹಾರ ನೀಡಲಾಗುತ್ತಿದೆ.
