ವಿಶ್ವದ ಅತಿದೊಡ್ಡ ಕಾಂಡೋಮ್ ಮಾರುಕಟ್ಟೆಗೆ , ಸೈಜ್ ಏನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 7:05 PM IST
Worlds Biggest condoms go on sale
Highlights

ಸುರಕ್ಷಿತ ಲೈಂಗಿಕ ಕ್ರಿಯೆಗೆಂದು ಕಂಡು ಹಿಡಿದ ಕಾಂಡೋಮ್ ಒಂದೊಂದು ಸಂದರ್ಭದಲ್ಲಿ ಪುರುಷನಿಗೆ ತೊಂದರೆ ನೀಡುವುದು ಇದೆ. ಅತಿ ಚಿಕ್ಕ ಕಾಂಡೋಮ್ ಗಳ  ಕಷ್ಟ ನಿವಾರಣೆ ಮನಗಂಡ ಕಂಪನಿಯೊಂದು ದೊಡ್ಡ ಗಾತ್ರದ ಕಾಂಡೋಮ್ ಬಿಡುಗಡೆ ಮಾಡಿದೆ.

ಲೈಂಗಿಕ ಕ್ರಿಯೆ ವೇಳೆ ನೋವು ತಡೆಗೆ  ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ದೊಡ್ಡ ಗಾತ್ರದ ಕಾಂಡೋಮ್ ನೆರವು ನೀಡಲಿದೆ. ಅಮೆರಿಕ ಮೂಲದ ಆನ್ ಲೈನ್ ಕಂಪನಿಯೊಂದು ವಿಶ್ವದ ಅತಿದೊಡ್ಡ ಕಾಂಡೋಮ್ ಬಿಡಿಗಡೆ ಮಾಡಲಿದೆ.

9.45 ಇಂಚು ಉದ್ದ ಮತ್ತು 69 ಮಿಮೀ ಸುತ್ತಳತೆಯ ಕಾಂಡೋಮ್ ಯಾವ ಕಾರಣಕ್ಕೂ ಕಿರಿಕಿರಿ ಮಾಡಲ್ಲ. ಡ್ಯುರೆಕ್ಸ್ ಮತ್ತು ಮ್ಯಾಗ್ನಮ್ ನ ಎಕ್ಸ್ ಎಲ್ ಕಾಂಡೋಮ್ ಗಳನ್ನು ಇದು ಮೀರಿಸುತ್ತಿದೆ. ಒಟ್ಟಿನಲ್ಲಿ ಫಿಟ್ ಅ್ಯಂಡ್ ಫೈನ್ ಆಗಿ ಯೋಚನೆ ಮಾಡಿರುವ ಕಂಪನಿ ಪುರುಷರ ನೆರವಿಗೆ ಧಾವಿಸಿದೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಸರ್ವೇ ಹೇಳುವಂತೆ ಶೇ. 5 ರಿಂದ 10 ರಷ್ಟು ಪುರುಷರು ತಮ್ಮ ಶಿಶ್ನದ ಗಾತ್ರಕ್ಕೆ ಸರಿ ಹೊಂದದ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಶೇ. 10 ರಿಂದ 15 ರಷ್ಟು ಜನ ತೀವ್ರ ಬಿಗಿತದ ಅನುಭವಕ್ಕೆ ಗುರಿಯಾಗುತ್ತಿದ್ದಾರೆ. ರಕ್ತ ಸಂಚಾರ ಮತ್ತು ಲೈಂಗಿಕ ತೃಪ್ತಿಯ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೆಲ್ಲವನ್ನಯ ಗಣನೆಗೆ ತೆಗೆದುಕೊಂಡ ಅಮೆರಿಕದ ಸಂಸ್ಥೆ ಕಾಂಡೋಮ್ ಗಾತ್ರವನ್ನು ಹಿಗ್ಗಿಸಿದ್ದು ಪುರುಷರಿಗೆ ಭರವಸೆ ತುಂಬುವ ಕೆಲಸ ಮಾಡಿದೆ.

loader