ವಿಶ್ವಸಂಸ್ಥೆಯು 2013ರಲ್ಲಿ ವಿಶ್ವ ವನ್ಯಜೀವಿ ದಿನವನ್ನು ಜಾರಿಗೆ ತಂದಿದ್ದು, ಪ್ರತಿವರ್ಷ ಒಂದೊಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

ನವದೆಹಲಿ(ಮಾ.03): ಭೂಮಿಯಲ್ಲಿರುವ ಪ್ರಾಣಿಗಳ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯು 2013ರಲ್ಲಿ ವಿಶ್ವ ವನ್ಯಜೀವಿ ದಿನವನ್ನು ಜಾರಿಗೆ ತಂದಿದ್ದು, ಪ್ರತಿವರ್ಷ ಒಂದೊಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ "ಲಿಸನ್ ಟು ದ ಯಂಗ್ ವಾಯ್ಸ್'ಸ್" ಘೋಷವಾಕ್ಯದೊಂದಿಗೆ ಜಗತ್ತಿನಾದ್ಯಂತ ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲಾಯಿತು.

ಜಗತ್ತಿನಾದ್ಯಂತ ಸುಮಾರು 10-24 ವಯೋಮಾನದ ಯುವಕರು ಶೇಕಡ 25ರಷ್ಟಿದ್ದು ವನ್ಯಜೀವಿ ಕಾಪಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ವಿಶ್ವಾಸ ವಿಶ್ವಸಂಸ್ಥೆಯದ್ದಾಗಿದೆ.

ಈ ಸಂದರ್ಭದಲ್ಲಿ ದೇಶದ ಪ್ರಸಿದ್ಧ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪ್ರಾಣಿಗಳನ್ನು ಕಾಪಾಡಿ ಎನ್ನುವ ಸಂದೇಶ ಸಾರುವ ಸುಂದರವಾದ ಆಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ.

Scroll to load tweet…