ಡಿಸ್ನಿ ವರ್ಲ್ಡ್ ರೀತಿಯ ಅಮೆರಿಕಾ ಕಂಪನಿಗಳು ಸ್ವದೇಶಿ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿ ಕಡಿಮೆ ಸಂಬಳಕ್ಕಾಗಿ ವಿದೇಶಿ ಉದ್ಯೋಗಿಗಳನ್ನು ಅದರಲ್ಲೂ ಭಾರತೀಯ ನೌಕರರನ್ನು ನೇಮಿಸಿಕೊಳ್ಳುತ್ತಿದೆ.

ವಾಷಿಂಗ್ಟನ್(ಡಿ.10): ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯರ ವಿರುದ್ಧ ಗುಡುಗಿದ್ದಾರೆ.

ಇನ್ನು ಹೆಚ್-1ಬಿ ವೀಸಾಗೆ ಸಂಬಂಧಿಸಿದಂತೆ ಲೋವಾ ಪಟ್ಟಣದಲ್ಲಿ ತಮ್ಮ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಇನ್ನು ಮುಂದೆ ಅಮೆರಿಕಾ ಉದ್ಯೋಗಿಗಳ ಬದಲಾಗಿ ಹೆಚ್-1ಬಿ ಮೂಲಕ ಅಮೆರಿಕಾಕ್ಕೆ ಆಗಮಿಸುವ ವಿದೇಶಿ ಉದ್ಯೋಗಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಭಾರತೀಯರನ್ನು ತಮ್ಮ ದೇಶಕ್ಕೆ ಪ್ರವೇಶಿಸುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

ಡಿಸ್ನಿ ವರ್ಲ್ಡ್ ರೀತಿಯ ಅಮೆರಿಕಾ ಕಂಪನಿಗಳು ಸ್ವದೇಶಿ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿ ಕಡಿಮೆ ಸಂಬಳಕ್ಕಾಗಿ ವಿದೇಶಿ ಉದ್ಯೋಗಿಗಳನ್ನು ಅದರಲ್ಲೂ ಭಾರತೀಯ ನೌಕರರನ್ನು ನೇಮಿಸಿಕೊಳ್ಳುತ್ತಿದೆ. ಇನ್ನು ಮುಂದೆ ಈ ರೀತಿ ಆಗುವುದಕ್ಕೆ ನಾವು ಬಿಡುವುದಿಲ್ಲ ಎಂದು ತಿಳಿಸಿದರು.

ಕೊನೆಯ ಅಮೆರಿಕನ್ನರ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತೇವೆ. ಅಮೆರಿಕನ್ನರ ಬದುಕಿನ ರಕ್ಷಣೆಗೆ ನಾವು ಸದಾ ಸಿದ್ದವಿದ್ದೇವೆ. ಟ್ರಂಪ್ ಅವರ ಆಕ್ರೋಶ ಭರಿತ ಮಾತುಗಳಿಗೆ ಸಭಿಕರಿಂದ ಚಪ್ಪಾಳೆಯ ಸುರಿಮಳೆಯೇ ಹರಿದು ಬಂತು. ನಮ್ಮ ದೇಶದ ಕೆಲವು ಕಂಪನಿಗಳು ಕಡಿಮೆ ವೇತನಕ್ಕಾಗಿ ಹೆಚ್-1ಬಿ ವೀಸಾ ಮೂಲಕ ವಿದೇಶಿಗರು ಅದರಲ್ಲೂ ಬಹುತೇಕ ಭಾರತೀಯರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ತಡೆ ಬೀಳ ಈ ಸಂದರ್ಭದಲ್ಲಿ ಅಕ್ರಮ ವಲಸೆ ಹಾಗೂ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.