ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವಿಧೇಯಕ ಮಂಡಿಸಿದರು. ಮರುನಾಮಕರಣವನ್ನು ಸ್ವಾಗತಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಿಯ ಗೌರವಕ್ಕೆ ಧಕ್ಕೆ ತರುವಂತಹ ಅವ್ಯವಹಾರಗಳು ಇಲ್ಲಿ ನಡೆದಿವೆ. ಅಕ್ಕಮಹಾದೇವಿ ಹೆಸರಿಗೆ ಕಳಂಕವಾಗಬಾರದು. ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಚುರುಕುಗೊಳ್ಳಬೇಕಿದೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.

ವಿಧಾನಸಭೆ: ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಇನ್ನು ಮುಂದೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂದು ಕರೆಸಿಕೊಳ್ಳಲಿದೆ, ಮಹಿಳಾ ವಿವಿ ಮರುನಾಮಕರಣ ಮಾಡುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಗಳವಾರ ವಿಧಾನಸಭೆಯಲ್ಲಿ ಅನುಮೋದನೆಗೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವಿಧೇಯಕ ಮಂಡಿಸಿದರು. ಮರುನಾಮಕರಣವನ್ನು ಸ್ವಾಗತಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ವಿವಿಯ ಗೌರವಕ್ಕೆ ಧಕ್ಕೆ ತರುವಂತಹ ಅವ್ಯವಹಾರಗಳು ಇಲ್ಲಿ ನಡೆದಿವೆ. ಅಕ್ಕಮಹಾದೇವಿ ಹೆಸರಿಗೆ ಕಳಂಕವಾಗಬಾರದು. ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಚುರುಕುಗೊಳ್ಳಬೇಕಿದೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ರಾಯರೆಡ್ಡಿ, ಅಕ್ರಮವಾಗಿದೆ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಲ್ಲ ಎಂದಾಗ ಬಿಜೆಪಿಯ ಗೋವಿಂದ ಕಾರಜೋಳ, ಯಾವ ಸರ್ಕಾರದ ಅವಧಿಯಲ್ಲಾದರೇನು. ಅಕ್ರಮ ಎಸಗಿದ ಕುಲಪತಿ ಮನಸ್ಸಿಗೆ ಬಂದವರಿಗೆ ನೇಮಕಾತಿ ಮಾಡಿ ದೇಶ ಬಿಟ್ಟಿದ್ದಾರೆ. ಇದನ್ನು ಸ್ವತಂ ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ವಿವಿಗಳಿಂದ ಸರ್ಟೀಫಿಕೇಟ ತಂದು ನೇಮಕ ಮಾಡಿದ್ದಾರೆ ಎಂದರು.