ಜೀನ್ಸ್‌ ಧರಿಸುವ ಮಹಿಳೆಯರಿಂದ ಹಿಜಡಾಗಳ ಜನನ: ಕೇರಳ ಶಿಕ್ಷಕನ ವಿವಾದ

news | Thursday, April 5th, 2018
Suvarna Web Desk
Highlights

ಇತ್ತೀಚೆಗೆ ಕಲ್ಲಿಕೋಟೆಯ ಪ್ರಾಧ್ಯಾಪಕರೊಬ್ಬರು ತಮ್ಮ ಕಾಲೇಜಿನ ವಿದ್ಯಾರ್ಥಿನಿಯರ ಎದೆ ಕೊರೆದಿಟ್ಟಕಲ್ಲಂಗಡಿ ಹಣ್ಣಿನಂತಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಕೇರಳದ ಶಿಕ್ಷಕರೊಬ್ಬರು ಜೀನ್ಸ್‌ ಹಾಗೂ ಟೀ ಶರ್ಟ್‌ ಧರಿಸುವ ಮಹಿಳೆ ಹಿಜಡಾಗಳಿಗೆ ಜನ್ಮ ನೀಡುತ್ತಾಳೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ನವದೆಹಲಿ: ಇತ್ತೀಚೆಗೆ ಕಲ್ಲಿಕೋಟೆಯ ಪ್ರಾಧ್ಯಾಪಕರೊಬ್ಬರು ತಮ್ಮ ಕಾಲೇಜಿನ ವಿದ್ಯಾರ್ಥಿನಿಯರ ಎದೆ ಕೊರೆದಿಟ್ಟಕಲ್ಲಂಗಡಿ ಹಣ್ಣಿನಂತಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಕೇರಳದ ಶಿಕ್ಷಕರೊಬ್ಬರು ಜೀನ್ಸ್‌ ಹಾಗೂ ಟೀ ಶರ್ಟ್‌ ಧರಿಸುವ ಮಹಿಳೆ ಹಿಜಡಾಗಳಿಗೆ ಜನ್ಮ ನೀಡುತ್ತಾಳೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಕೇರಳದ ಶ್ರೀ ಶಂಕರ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಶಿಕ್ಷಕರಾಗಿರುವ ಡಾ.ರಜಿತ್‌ ಕುಮಾರ್‌, ಹಿಜಡಾ ಮತ್ತು ದುರ್ಬಲ ಮಕ್ಕಳು ಯಾಕೆ ಹುಟ್ಟುತ್ತಾರೆ ಎಂಬ ಬಗ್ಗೆ ತರಗತಿಯೊಂದರಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಅವರ ಪ್ರಕಾರ, ಮಹಿಳೆಯರು ಜೀನ್ಸ್‌ ಧರಿಸುವುದರಿಂದ ಅವರಲ್ಲಿ ಸ್ತ್ರೀತನ ದುರ್ಬಲಗೊಳ್ಳುತ್ತದೆ.

ಹೀಗಾಗಿ ಅವರು ಹಿಜಡಾಗಳಿಗೆ ಜನ್ಮ ನೀಡುತ್ತಾರೆ. ಸರಿಯಾಗಿ ಬಟ್ಟೆತೊಡುವ ಪುರಷ ಮತ್ತು ಮಹಿಳೆಯರಿಗೆ ಒಳ್ಳೆಯ ಮಗು ಜನಿಸುತ್ತದೆ ಎಂದು ಹೇಳಿದ್ದಾರೆ. ರಜಿತ್‌ ಕುಮಾರ್‌ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ರಜಿತ್‌ ಕುಮಾರ್‌ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

Comments 0
Add Comment

    Teacher slaps Student

    video | Thursday, April 12th, 2018
    Suvarna Web Desk