ಇನ್ನು ಮುಂದೆ ಮೆಷಿನ್‌ನಲ್ಲೇ ಮಹಿಳೆಯರ ಒಳ ಉಡುಪು ಸಿಗುತ್ತೆ!

First Published 12, Feb 2018, 7:42 AM IST
Women Shop inner wear in  Machines
Highlights

ನಗದು ಪಡೆಯುವ ಕಾರಣಕ್ಕಾಗಿ ಬ್ಯಾಂಕಿನ ಶಾಖೆಗಳಲ್ಲಿ ಸಾಲುಗಟ್ಟಿನಿಲ್ಲದೆ, ಎಟಿಎಂ(ಆಟೋಮೆಟಿಕ್‌ ಟೆಲ್ಲರ್‌ ಮೆಶಿನ್‌)ಗಳಲ್ಲಿ ಪಡೆಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಇನ್ನು ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ರೀತಿಯ ಮೆಶಿನ್‌ಗಳಲ್ಲಿ ಮಹಿಳೆಯರ ಒಳ ಉಡುಪುಗಳು ಸಹ ದೊರೆಯಲಿವೆ.

ನವದೆಹಲಿ : ನಗದು ಪಡೆಯುವ ಕಾರಣಕ್ಕಾಗಿ ಬ್ಯಾಂಕಿನ ಶಾಖೆಗಳಲ್ಲಿ ಸಾಲುಗಟ್ಟಿನಿಲ್ಲದೆ, ಎಟಿಎಂ(ಆಟೋಮೆಟಿಕ್‌ ಟೆಲ್ಲರ್‌ ಮೆಶಿನ್‌)ಗಳಲ್ಲಿ ಪಡೆಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಇನ್ನು ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೇ ರೀತಿಯ ಮೆಶಿನ್‌ಗಳಲ್ಲಿ ಮಹಿಳೆಯರ ಒಳ ಉಡುಪುಗಳು ಸಹ ದೊರೆಯಲಿವೆ.

ಹೌದು, ಮಹಿಳೆಯರ ಒಳ ಉಡುಪುಗಳನ್ನು ಮಾತ್ರವೇ ಜೋಡಣೆಯಾದ ಮೆಶಿನ್‌ ಕೆಲವೇ ದಿನಗಳಲ್ಲಿ ಮುಂಬೈನಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮಹಿಳೆಯರು ತಮ್ಮ ಗಾತ್ರ, ತಮಗಿಷ್ಟವಾದ ಶೈಲಿಯ ಒಳ ತೊಡುಗೆಗಳನ್ನು ಆಯ್ಕೆ ಮಾಡಬೇಕಿದೆ.

ಅಂದಂಗೆ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳದೇ ಒಳ ಉಡುಪುಗಳ ಖರೀದಿಗೆ ಪ್ರೇರಣೆ ನೀಡಲು ಈ ಕ್ರಮಕ್ಕೆ ನಿರ್ಧರಿಸಲಾಗಿದೆ.

loader