ಮುಂಬೈ[ಡಿ.19]: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸ್ಮಶಾನಕ್ಕೆ ಬಾಗಿಲು ಹಾಕಿದ ಮತ್ತು ಮೂರು ಮದುವೆಗಳನ್ನು ರದ್ದು ಮಾಡಿದ ಘಟನೆ ನಡೆದಿದೆ.

ಪ್ರಧಾನಿ ಭದ್ರತೆ ಹೆಸರಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರ ವರ್ತನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೋದಿ ಕಾರ್ಯಕ್ರಮ ನಡೆಯುವ ಸ್ಥಳದಿಂದ 200 ಮೀಟರ್‌ ದೂರದಲ್ಲಿದ್ದ ಸ್ಮಶಾನಕ್ಕೆ ಸೋಮವಾರ ರಾತ್ರಿಯಿಂದಲೇ ಯಾವುದೇ ಶವಗಳನ್ನು ತರದಂತೆ ನಿಷೇಧಿಸಲಾಗಿತ್ತು.

ಅಲ್ಲದೆ ಮೋದಿ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳದ ಸಮೀಪವೇ 3 ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿದ್ದ 3 ವಿವಾಹ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.