ನವದೆಹಲಿ (ಫೆ.10): ಸಂಸತ್ತಿನಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ನವದೆಹಲಿ (ಫೆ.10): ಸಂಸತ್ತಿನಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿ ನೀಡಬೇಕು ಎನ್ನುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಉತ್ತರ ಪ್ರದೇಶ ಚುನಾವಣೆ ಮುಂಬರಲಿದ್ದು, ಪಂಚರಾಜ್ಯ ಚುನಾವಣೆಯಲ್ಲಿ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಒಂದುವೇಳೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ರಾಜ್ಯಸಭೆಯಲ್ಲಿ ಬಿಜೆಪಿ ಕಾಂಗ್ರೆಸ್ ಸಂಸದರ ಸಂಖ್ಯಾಬಲವಾಗಬಹುದು ಅಥವಾ ಹೆಚ್ಚಾಗಬಹುದು. ಇದು ಬಿಜೆಪಿಗೆ ಒಂದು ಅಸ್ತ್ರವಾಗಲಿದೆ. ಆಗ ಮಹಿಳಾ ಮೀಸಲಾತಿಗೆ ಬಹುಮತ ಸಿಗುವ ಸಾಧ್ಯತೆ ದಟ್ಟವಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ತಲೆಯಲ್ಲಿ ಮಹಿಳಾ ಮೀಸಲಾತಿಯನ್ನು ತರಬೇಕು ಎನ್ನುವ ವಿಚಾರವಿದೆ. ಆ ದಿನ ಹೆಚ್ಚು ದೂರವಿಲ್ಲ. ರಾಜ್ಯಸಭೆಯಲ್ಲಿ ಎನ್ ಡಿಎಗೆ ಬಹುಮತ ಸಿಕ್ಕಾಗ ನಾವು ಮಸೂದೆಯನ್ನು ಅನುಮೋದಿಸುತ್ತೇವೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.