ಬೆಳಗಾವಿ (ಜು. 10): ದೇಶ​ದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವ ಮಹಿಳಾ ಯೋಧರ (ಮಿಲಿಟರಿ ಪೊಲೀಸ್‌) ನೇಮಕಾತಿ ರ‍್ಯಾಲಿ ಕರ್ನಾಟಕದ ಬೆಳಗಾವಿ ಸೇರಿ ದೇಶ​ದ ಐದು ಕಡೆ​ ಸದ್ಯದಲ್ಲೇ ಚಾಲನೆ ಸಿಗಲಿದೆ.

ಬೆಳಗಾವಿಯಲ್ಲಿ ಮರಾಠಾ ಲಘು ಪದಾತಿದಳ ಕೇಂದ್ರದ ಆವರಣದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಜು.22ರಿಂದ 27ರವರೆಗೆ ಈ ನೇಮಕಾತಿ ರಾರ‍ಯಲಿ ನಡೆಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪೂರ್ವಸಿದ್ಧತಾ ಸಭೆ ನಡೆ​ಯಿತು.

ದೇಶದಲ್ಲಿ ಮೊದಲ ಬಾರಿ ಮಹಿಳಾ ಸೈನಿಕರ (ಮಿಲಿಟರಿ ಪೊಲೀಸ್‌) ಭರ್ತಿ ರಾರ‍ಯಲಿ ನಡೆಸಲಾಗುತ್ತಿದ್ದು ಇದರಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯದ ಅಭ್ಯರ್ಥಿಗಳು ಭಾಗವಹಿಸುವರು. ರಾರ‍ಯಲಿಯಲ್ಲಿ ಒಟ್ಟಾರೆ ಸುಮಾರು 4 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದರು.

ನೇಮಕಾತಿ ರಾರ‍ಯಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಸ್‌ ಹಾಗೂ ರೈಲು ನಿಲ್ದಾಣದಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಸೂಕ್ತ ಸಾರಿಗೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಸೂಚಿ​ಸಿ​ದರು.

- ರಾರ‍ಯಲಿಯಲ್ಲಿ ಕೇರಳ, ತ.ನಾಡು, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಅಭ್ಯರ್ಥಿಗಳು ಭಾಗಿ

- ದೇಶದಲ್ಲಿ ಮಹಿಳಾ ಯೋಧರ ನೇಮಕಾತಿ ನಡೆಯುತ್ತಿರುವುದು ಇದೇ ಮೊದಲು