ಮಹಿಳೆಯೊಬ್ಬರು ಹಣಕ್ಕಾಗಿ ಮೂವರನ್ನು ಮದುವೆಯಾಗಿ ವಂಚಿಸಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಮಹಿಳೆಯ ಎರಡನೇ ಪತಿ, ನಗರದ ಎಸ್‌'ಎಸ್ ಪುರಂ ನಿವಾಸಿ ಜಗದೀಶ್ ಎಂಬುವವರು ಈ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ತುಮಕೂರು(ಸೆ.20): ಮಹಿಳೆಯೊಬ್ಬರು ಹಣಕ್ಕಾಗಿ ಮೂವರನ್ನು ಮದುವೆಯಾಗಿ ವಂಚಿಸಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಮಹಿಳೆಯ ಎರಡನೇ ಪತಿ, ನಗರದ ಎಸ್‌'ಎಸ್ ಪುರಂ ನಿವಾಸಿ ಜಗದೀಶ್ ಎಂಬುವವರು ಈ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಗ್ರಾಮದ ಮಹಿಳೆ, ಹಣ ಇರುವವರನ್ನು ಮದುವೆಯಾಗಿ ಬಳಿಕ ಅವರನ್ನು ಯಾಮಾರಿಸಿ ಅವರಿಂದ ಹಣ, ಒಡವೆ ಕಿತ್ತುಕೊಂಡ ಬಳಿಕ ಅವರಿಗೇ ಕಿರುಕುಳ ನೀಡಿ ವಿಚ್ಛೇದನ ಪಡೆಯುವುದನ್ನೇ ವ್ಯವಹಾರ ಮಾಡಿಕೊಂಡಿದ್ದಾಳೆ. ಈ ರೀತಿ ಆಕೆ ಈಗಾಗಲೇ ಮೂರು ಮದುವೆಯಾಗಿ ವಂಚಿಸಿದ್ದಾಳೆ.

ಈಕೆ 2000ದಲ್ಲಿ ತಿಪಟೂರಿನ ಲಿಂಗದೇವರು ಎಂಬುವವರನ್ನು ಮದುವೆಯಾಗಿದ್ದಳು. ಬಳಿಕ ಅವರಿಂದ ಹಣ, ಆಸ್ತಿ ಕಿತ್ತುಕೊಂಡು ವಿಚ್ಛೇದನ ಪಡೆದಳು. ಬಳಿಕ ‘ನನಗೆ ಮದುವೆಯೇ ಆಗಿಲ್ಲ’ ಎಂದು ಹೇಳಿ 2016ರಲ್ಲಿ ನನ್ನನ್ನು ವಿವಾಹವಾದಳು. ಆಮೇಲೆ, ನನಗೂ ಹಣಕ್ಕಾಗಿ ಕಿರುಕುಳ ನೀಡಿ, ನನ್ನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಳು. ಸಾಲದ್ದಕ್ಕೆ ವಿಚ್ಛೇದನ ಕೋರಿ ನ್ಯಾಯಾಲದ ಮೊರೆ ಹೋಗಿದ್ದಾಳೆ. ಈಗ ಮತ್ತೊಂದು ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.