ಮಹಿಳಾ ದಿನದ ವಿಶೇಷ; ಹೀರೋಗಳ ಪ್ರಪಂಚದಲ್ಲಿ ದಿಟ್ಟತನ ತೋರಿದವರಿವರು

news | Thursday, March 8th, 2018
Suvarna Web Desk
Highlights

ಮೊದಲು ನಾನು ನಿರ್ದೇಶಕಿ. ಅದರಲ್ಲಿ ಮಹಿಳಾ ನಿರ್ದೇಶಕಿ ಅಥವಾ ಪುರುಷ ನಿರ್ದೇಶಕ ಅಂತೇನಿಲ್ಲ. ಆದರೂ ನಾನೊಬ್ಬಳು ಮಹಿಳೆ. ಹಾಗಾಗಿ ಮಹಿಳಾ ಪ್ರಧಾನ ಸಿನಿಮಾ ಮಾಡ್ಬೇಕು ಅಂತ ಆಸೆ ಪಡೋದ್ರಲ್ಲಿ ತಪ್ಪಿಲ್ಲ. ಇದು ನಾನು ಮಾತ್ರವಲ್ಲ ಇಲ್ಲಿರುವ ಅಷ್ಟು ಮಹಿಳಾ ನಿರ್ದೇಶಕರ ಆಸೆಯೂ ಆಗಿರುತ್ತೆ. ಆದರೆ, ಅದಕ್ಕೆ ಪೂರಕವಾದ ವಾತಾವರಣ ಕನ್ನಡ ಚಿತ್ರೋದ್ಯಮದಲ್ಲಿ ಅಷ್ಟಾಗಿ ಇಲ್ಲ. ಹೇಳಿ-ಕೇಳಿ ಚಿತ್ರೋದ್ಯಮ ಪುರುಷ
ಪ್ರಧಾನವಾದದ್ದು. ಹೀರೋ ಕೇಂದ್ರಿತ ಚಿತ್ರಗಳೇ ಇಲ್ಲಿ ಪ್ರಧಾನ. 

ಮೊದಲು ನಾನು ನಿರ್ದೇಶಕಿ. ಅದರಲ್ಲಿ ಮಹಿಳಾ ನಿರ್ದೇಶಕಿ ಅಥವಾ ಪುರುಷ ನಿರ್ದೇಶಕ ಅಂತೇನಿಲ್ಲ. ಆದರೂ ನಾನೊಬ್ಬಳು ಮಹಿಳೆ. ಹಾಗಾಗಿ ಮಹಿಳಾ ಪ್ರಧಾನ ಸಿನಿಮಾ ಮಾಡ್ಬೇಕು ಅಂತ ಆಸೆ ಪಡೋದ್ರಲ್ಲಿ ತಪ್ಪಿಲ್ಲ. ಇದು ನಾನು ಮಾತ್ರವಲ್ಲ ಇಲ್ಲಿರುವ ಅಷ್ಟು ಮಹಿಳಾ ನಿರ್ದೇಶಕರ ಆಸೆಯೂ ಆಗಿರುತ್ತೆ. ಆದರೆ, ಅದಕ್ಕೆ ಪೂರಕವಾದ ವಾತಾವರಣ ಕನ್ನಡ ಚಿತ್ರೋದ್ಯಮದಲ್ಲಿ ಅಷ್ಟಾಗಿ ಇಲ್ಲ. ಹೇಳಿ-ಕೇಳಿ ಚಿತ್ರೋದ್ಯಮ ಪುರುಷ
ಪ್ರಧಾನವಾದದ್ದು. ಹೀರೋ ಕೇಂದ್ರಿತ ಚಿತ್ರಗಳೇ ಇಲ್ಲಿ ಪ್ರಧಾನ. 

ನಿರ್ಮಾಪಕರು ಕೂಡ ತಾವು ಹಾಕಿದ ಬಂಡವಾಳ ವಾಪಸ್  ಪಡೆಯಬೇಕು ಎನ್ನುವ ಆಸೆಗೆ ಹೀರೋಯಿಸಂ ಸುತ್ತಲ ಕತೆಗಳಿಗೆ ಮಾರು ಹೋಗುವುದು ಮಾಮೂಲು. ಜತೆಗೆ ಇಲ್ಲಿ ಬಾಲಿವುಡ್ ತರಹದ ಚಿತ್ರ ನಿರ್ಮಾಣದ ಸಂಸ್ಥೆಗಳಿಲ್ಲ. ಹಾಗಿದ್ದಿದ್ದರೆ ಹೀರೋ ಕೇಂದ್ರಿತ ಕತೆಗಳ ಜತೆಗೆ ಮಹಿಳಾ ಪ್ರಧಾನ ಕತೆಗಳಿಗೂ ಆದ್ಯತೆ ಸಿಗುತ್ತಿತ್ತು. ಹತ್ತರಲ್ಲಿ ಒಂದೆರಡು ಮಹಿಳಾ ಪ್ರಧಾನ ಸಿನಿಮಾಗಳೂ ಬರುತ್ತಿದ್ದವು. ಬದಲಿಗೆ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ಸ್ವತಂತ್ರ ನಿರ್ಮಾಪಕರೇ ಹೆಚ್ಚಾಗಿದ್ದಾರೆ. ಅವರು ತಮ್ಮದೇ ಲಾಭ -ನಷ್ಟದ ಲೆಕ್ಕಚಾರದಲ್ಲಿ  ನಾಯಕ ಪ್ರಧಾನ ಕಮರ್ಷಿಯಲ್ ಕತೆಗಳೇ ಬೇಕು ಎನ್ನುತ್ತಾರೆ. ಹೀಗಾಗಿ ಮಹಿಳಾ ನಿರ್ದೇಶಕಿಯರು ತಾವು ಆಸೆ ಪಟ್ಟಂತೆ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ತಪ್ಪಿದ್ದಲ್ಲ. 

-ಕವಿತಾ ಲಂಕೇಶ್ 

ಆದವಳಲ್ಲ. ಪ್ರಚಲಿತ ಕಮರ್ಷಿಯಲ್ ವಿಷಯಗಳೇ  ನನ್ನ ಸಿನಿಮಾದ ಪ್ರಮುಖ ಕಥಾವಸ್ತು. ಬಹುಮುಖ್ಯವಾಗಿ ನಾನು ಇಲ್ಲಿಗೆ ನಿರ್ದೇಶಕಿ ಆಗಿ ಬಂದಿದ್ದು, ಪುರುಷ ನಿರ್ದೇಶಕರ ಹಾಗೆಯೇ ಸಕ್ಸಸ್‌ಫುಲ್ ಕಮರ್ಷಿಯಲ್ ಸಿನಿಮಾ ಕೊಡಬೇಕು  ಎನ್ನುವ ಆಸೆ ಹೊತ್ತು. ಆರಂಭದಲ್ಲಿ ನಿರ್ದೇಶಿಸಿದ ‘ಕ್ವಾಟ್ಲೆ’  ಚಿತ್ರವೇ ಅದಕ್ಕೆ ಸಾಕ್ಷಿ. ಸೋಲು-ಗೆಲುವು ಆನಂತರದ ಪ್ರಶ್ನೆ, ಮಹಿಳೆಯಾಗಿ ನಾನು ಆಯ್ಕೆ ಮಾಡಿಕೊಳ್ಳುವ ಕಥಾವಸ್ತು ಕೂಡ ಮುಖ್ಯ. ಈಗ ‘ಆಶಿಕಿ ೫’ ಅಂತ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿದಿದೆ. ಅದರ ಕಥಾವಸ್ತು ಕೂಡ ಗಾಂಜಾ  ಮಾಫಿಯಾ ಕುರಿತದ್ದು. ಹೊಸದೊಂದು ಸಿನಿಮಾ ಶುರುವಾಗುತ್ತಿದೆ. ಅದರ ಕಥಾವಸ್ತು ಕೂಡ ಪಕ್ಕಾ ಕಮರ್ಷಿಯಲ್. ಒಟ್ಟಾರೆ ನಾನು ಮಹಿಳಾ ನಿರ್ದೇಶಕಿಯಾದರೂ, ಕಮರ್ಷಿಯಲ್ ಸಿನಿಮಾ ಮಾಡ್ಬೇಕು ಅಂತ ಬಂದಿದ್ದೇನೆ. ಹಾಗಂತ ಮಹಿಳಾ ಪ್ರಧಾನ ಸಿನಿಮಾ ಮಾಡೋದಿಲ್ಲವೇ? ಸಂದರ್ಭ ಬಂದಾಗ ಒಂದೊಳ್ಳೆ ಸಿನಿಮಾ ಮಾಡುವ ಆಸೆಯೂ ಇದೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಇಲ್ಲಿದೆಯೇ? ನಿರ್ಮಾಪಕರು ಸಿಗುತ್ತಾರೆಯೇ? ಆ ಬಗ್ಗೆ ನನಗೆ ಸಣ್ಣದೊಂದು ಆತಂಕವಿದೆ.

-ಚಂದ್ರಕಲಾ ನಿರ್ದೇಶಕಿ 

ನನ್ನ ಪ್ರಕಾರ ಪ್ರತಿ ದಿನವೂ ಮಹಿಳಾ ದಿನಾಚರಣೆಯೇ. ಒಂದು ಜೀವಕ್ಕೆ ಜನ್ಮ ಕೊಡುವಂತಹ ಶಕ್ತಿ ಇರುವವಳು ಆಕೆ ಪ್ರತಿ ದಿನವೂ ಹುಟ್ಟುತ್ತಾಳೆ. ಹಾಗೆ ಪ್ರತಿ ದಿನವೂ ಹುಟ್ಟು ಹೆಣ್ಣಿಗೆ ಪ್ರತಿ ದಿನವೂ ಗೌರವ ಸಿಗಬೇಕು. ನಾವು ಏನೇ
ಅಭಿವೃದ್ಧಿ ಆಗಿದೆ ಅಂತ ಹೇಳಿದರೂ ಇನ್ನೂ ಮಹಿಳೆಯರಿಗೆ ಆ ಅಭಿವೃದ್ಧಿಯ ಬೆಳಕು ದೊಡ್ಡ ಮಟ್ಟದಲ್ಲಿ ಸಿಕ್ಕಿಲ್ಲ. ಹಳ್ಳಿಗಳಲ್ಲಿ ಎಷ್ಟೋ ಮಂದಿ ಹೆಣ್ಣುಕ್ಕಳನ್ನು ಶಾಲೆಗೆ ಸೇರಿಸಿಲ್ಲ. ಹೆಣ್ಣಿಗೆ ಅಕ್ಷರ ಕಲಿಯುವಂತಹ ವಾತಾವರಣ ನಿರ್ಮಾಣ ಮಾಡುವ
ಮೂಲಕ ಇಂಥ ಮಹಿಳಾ ದಿನಾಚರಣೆಗಳು ನಡೆಯಬೇಕು ಎಂಬುದು ನನ್ನ ಅಭಿಪ್ರಾಯ. 

-ಸಂಗೀತಾ ಭಟ್ 

ಮಹಿಳಾ ದಿನಾಚರಣೆ ಎನ್ನುವುದು ಕೇವಲ ಒಂದು ದಿನಾಂಕ ಅಷ್ಟೇ. ಅದೊಂದು ಸೆಲೆಬ್ರೆಷನ್. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇವಲ್ಲ ಹಾಗೆ. ಆದರೆ, ಯಾವಾಗ ಮಹಿಳೆಗೆ ಎಲ್ಲ ರೀತಿಯಲ್ಲೂ ಸಮಾನ ಹಕ್ಕುಗಳು ಸಿಗುತ್ತವೋ, ಯಾವಾಗ ಎಲ್ಲರಂತೆ ಮಹಿಳೆಯನ್ನು ಗೌರವದಿಂದ ನೋಡಿ ನಡೆಸಿಕೊಳ್ಳುತ್ತಾರೋ, ಯಾವಾಗ ಮಹಿಳೆ ಎನಿಸಿಕೊಂಡವಳು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸಿಗುತ್ತದೋ, ಯಾವಾಗ  ಮನೆ, ಕೆಲಸ ಮಾಡುವ ಕ್ಷೇತ್ರದಲ್ಲಿ ಹೆಣ್ಣು ಎನ್ನುವ ಭೇದ ಮಾಡದೆ ನೋಡುತ್ತಾರೋ ಆಗ ನನ್ನ ಪ್ರಕಾರ ಮಹಿಳಾ ದಿನಾಚರಣೆಗೆ ಸರಿಯಾದ ಅರ್ಥ ಬರುತ್ತದೆ. 

-ಸೋನು ಗೌಡ, ನಟಿ 

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk