ವಿಚ್ಚೇದನ ಪ್ರಕರಣ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ನನ್ನ ಪತಿಯ ಕಡೆಯವರು ಬೆದರಿಕೆ ಹಾಕಿದ್ದಾರೆ'
ಬೆಂಗಳೂರು(ಮಾ.10): ನಗರದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಪತಿ ನಪಂಸಕ ಆದ ಕಾರಣ ನನಗೆ ವಿಚ್ಚೇದನ ನೀಡಿ ಎಂದು ಮಹಿಳೆಯೊಬ್ಬಳು ಕೌಟಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಆರ್.ಟಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಮಧುರಾ ಎಂಬ ಮಹಿಳೆ' ನನ್ನ ಪತಿ ಇಂದ್ರಜಿತ್ ನಪಂಸಕ ಎಂದು ಗೊತ್ತಿದ್ದರೂ ನಾನು ಹೊರ ಜಗತ್ತಿಗೆ ಗೊತ್ತಾಗಬಾರದೆಂಬ ಕಾರಣದಿಂದ ಹೊಂದಿಕೊಂಡಿದ್ದೆ. ಆದರ ನನ್ನ ಪತಿ ಶೀಲ ಶಂಕಿಸಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಗಂಡನ ಕಿರುಕುಳ ತಾಳಲಾರದೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ವಿಚ್ಚೇದನ ಪ್ರಕರಣ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ನನ್ನ ಪತಿಯ ಕಡೆಯವರು ಬೆದರಿಕೆ ಹಾಕಿದ್ದಾರೆ' ಎಂದು ಮಹಿಳೆ ತಿಳಿಸಿದ್ದಾಳೆ. ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
