ಮಾಣಿಕ್‌ ಸರ್ಕಾರ್‌ ಮನೆಯಲ್ಲಿ ಮಹಿಳೆ ಅಸ್ಥಿಪಂಜರ!

First Published 11, Mar 2018, 10:20 AM IST
Womans Skeleton found at Manik Sarkars house
Highlights

2005ರಲ್ಲಿ ಅಂದಿನ ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ಅಧಿಕೃತ ಸಿಎಂ ನಿವಾಸದ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯೊಬ್ಬಳ ಅಸ್ಥಿಪಂಜರ ಸಿಕ್ಕಿತ್ತು’ ಎಂದು ಆರೋಪಿಸಿರುವ ತ್ರಿಪುರ ಬಿಜೆಪಿ ಸಂಘಟನಾ ಉಸ್ತುವಾರಿ ಸುನೀಲ್‌ ದೇವಧರ್‌, ‘ಹೊಸ ಸಿಎಂ ಬಿಪ್ಲಬ್‌ ದೇಬ್‌ ಅವರು ಈ ಮನೆಗೆ ಪ್ರವೇಶಿಸುವ ಮುನ್ನ ಟ್ಯಾಂಕ್‌ ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಅಗರ್ತಲಾ : ‘2005ರಲ್ಲಿ ಅಂದಿನ ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ಅಧಿಕೃತ ಸಿಎಂ ನಿವಾಸದ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯೊಬ್ಬಳ ಅಸ್ಥಿಪಂಜರ ಸಿಕ್ಕಿತ್ತು’ ಎಂದು ಆರೋಪಿಸಿರುವ ತ್ರಿಪುರ ಬಿಜೆಪಿ ಸಂಘಟನಾ ಉಸ್ತುವಾರಿ ಸುನೀಲ್‌ ದೇವಧರ್‌, ‘ಹೊಸ ಸಿಎಂ ಬಿಪ್ಲಬ್‌ ದೇಬ್‌ ಅವರು ಈ ಮನೆಗೆ ಪ್ರವೇಶಿಸುವ ಮುನ್ನ ಟ್ಯಾಂಕ್‌ ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ದೇಬ್‌ ಒಬ್ಬರೇ ಅಲ್ಲ, ಹೊಸದಾಗಿ ಸಚಿವರಾಗಿ ಸರ್ಕಾರಿ ಬಂಗಲೆಗಳನ್ನು ಪಡೆಯುತ್ತಿರುವ ಸಚಿವರೆಲ್ಲ ಒಮ್ಮೆ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸುವುದು ಒಳ್ಳೆಯದು. ಏಕೆಂದರೆ ಅಲ್ಲಿ ಇನ್ನೂ ಎಷ್ಟುಅಸ್ಥಿಪಂಜರಗಳು ಇವೆಯೋ’ ಎಂಬ ವಿಚಿತ್ರ ಶಂಕೆಯನ್ನು ದೇವಧರ್‌ ವ್ಯಕ್ತಪಡಿಸಿದ್ದಾರೆ.

‘ಸಿಪಿಎಂನವರು ತ್ರಿಪುರಾವನ್ನು 25 ವರ್ಷ ಆಳಿದರು. ಎಷ್ಟುರಾಜಕೀಯ ಕೊಲೆಗಳನ್ನು ಎಡರಂಗದವರು ಮಾಡಿದ್ದಾರೋ? ಆದ್ದರಿಂದ ಒಮ್ಮೆ ಟ್ಯಾಂಕ್‌ ಶುದ್ಧೀಕರಣ ಮಾಡುವುದು ಉತ್ತಮ’ ಎಂದು ಅವರು ಹೇಳಿದ್ದಾರೆ.

loader