ಪ್ರೀತಿ ಅಥವಾ ಸ್ನೇಹವನ್ನು ವ್ಯಕ್ತಪಡಿಸಲು ಕಿಸ್ ಮಾಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಬ್ಬ ಮಹಿಳೆಗೆ ದೀರ್ಘ ಕಾಲ ಕಿಸ್ ಮಾಡಿದ್ದಕ್ಕಾಗಿ ಬೆಲೆಬಾಳುವ ಕಾರು ಸಿಕ್ಕಿದೆ. ಇದನ್ನು ಕೇಳಿ ನಿಮಗೆ ವಿಚಿತ್ರವೆನಿಸಬಹುದು ಆದರೂ ಇದು ಸತ್ಯ!

ಟೆಕ್ಸಾಸ್(ಎ.22): ಪ್ರೀತಿ ಅಥವಾ ಸ್ನೇಹವನ್ನು ವ್ಯಕ್ತಪಡಿಸಲು ಕಿಸ್ ಮಾಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೊಬ್ಬ ಮಹಿಳೆಗೆ ದೀರ್ಘ ಕಾಲ ಕಿಸ್ ಮಾಡಿದ್ದಕ್ಕಾಗಿ ಬೆಲೆಬಾಳುವ ಕಾರು ಸಿಕ್ಕಿದೆ. ಇದನ್ನು ಕೇಳಿ ನಿಮಗೆ ವಿಚಿತ್ರವೆನಿಸಬಹುದು ಆದರೂ ಇದು ಸತ್ಯ!

ಆಸ್ಟಿನ್ ರೆಡಿಯೋ 96.7 ಕಿಸ್ FM ಸ್ಟೇಷನ್ KISS a KIA ಎಂಬ ಸ್ಪರ್ಧೆಯೊಂದನ್ನು ಬಾಯೋಜಿಸಿದ್ದು, ಈ ಸ್ಪರ್ಧೆಯಲ್ಲಿ KIA Optima LX ಕಾರನ್ನು ಚುಂಬಿಸಬೇಕಿತ್ತು. ನಿಯಮದನ್ವಯ ಯಾವ ವ್ಯಕ್ತಿ ದೀರ್ಘ ಕಾಲ ಈ ಕಾರನ್ನು ಚುಂಬಿಸುತ್ತಾರೋ ಅವರನ್ನು ಸನ್ಮಾನಿಸಿ ಈ ಕಾರನ್ನೇ ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು. ಈ ಸ್ಪರ್ಧೆಯಲ್ಲಿ ಒಟ್ಟು 20 ಮಂದಿ ಭಾಗವಹಿಸಿದ್ದರಾದರೂ, ಟೆಕ್ಸಾಸ್'ನ ಆಸ್ಟಿನ್'ನಲ್ಲಿ ವಾಸವಿರುವ ದಿಲಿನಿ ಜಯಸೂರ್ಯ ಮಾತ್ರ ದೀರ್ಘಕಾಲ ಕಾರಿಗೆ ಕಿಸ್ ನೀಡಿ ಕಾರನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇವರು ಸುಮಾರು 520 ಗಂಟೆ ಕಾರಿಗೆ ಚುಂಬಿಸಿದ್ದಾರೆ.

ಈ ವಿಚಿತ್ರ ಸ್ಪರ್ಧೆಯ ಆರಂಭದ ನಾಲ್ಕು ಗಂಟೆಯನ್ನು ಫೇಸ್'ಬುಕ್ ಲೈವ್ ಮೂಲಕ ಪ್ದರಸರವೂ ಮಾಡಲಾಗಿತ್ತು. ಇನ್ನು ಕಿಸ್ ಮಾಡಿದ ಸ್ಪರಧಿಗಳ ತುಟಿಗಳು ತೊಂದರೆಯನ್ನೂ ಅನುಭವಿಸಿದವು ಎಂದೂ ತಿಳಿದು ಬಂದಿದೆ. ದೀರ್ಘ ಕಾಲ ಕಾರಿಗೆ ಮುತ್ತು ನೀಡುವ ಭರದಲ್ಲಿ ತುಟಿಗಳನ್ನು ಕಾರಿಗೊತ್ತಿದ ಪರಿಣಾಮವಾಗಿ ಸ್ಪರ್ಧಿಗಳ ಮುಖದಲ್ಲಿ ಊತವೂ ಕಂಡು ಬಂದಿದೆಯಂತೆ. ಇನ್ನು ಕೆಲವರಿಗೆ ಮೈ ಕೈ ಹಾಗೂ ಸೊಂಟ ನೋವೂ ಆರಂಭವಾಗಿದೆ.

ಆದರೆ ಇಷ್ಟೆಲ್ಲಾ ಕಷ್ಟ ಅನುಭವಿಸಿದರೂ ತಾನು ಕಾರು ಗೆದ್ದ ಖುಷಿಯಲ್ಲಿದ್ದ ವಿಜೇತೆ ದಿಕಿನಿಯ ಮುಖದಲ್ಲಿ ಮಾತ್ರ ಆ ನೋವು ಮಾಯವಾಗಿತ್ತು. ಈ ಮೊದಲೂ ಇದೇ ರೀತಿಯ ಸ್ಪರ್ಧೆಯನ್ನು ಆಯೋಜಿಸಿದ್ದು, ಆ ಸಂದರ್ಭದಲ್ಲಿ ಅಮೆರಿಕಾದ ಮಹಿಳೆಯೊಬ್ಬಳು 70 ಗಂಟೆಯ ಕಾಲ ಕಾರಿಗೆ ಕಿಸ್ ನೀಡಿ ದಾಖಲೆ ಸೃಷ್ಟಿಸಿದ್ದರಂತೆ.

ಕೃಪೆ: NDTv