Asianet Suvarna News Asianet Suvarna News

2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್!

ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ವರುಣನ ಅಬ್ಬರ| ಮಳೆಯ ನರ್ತನಕ್ಕೆ ತತ್ತರಿಸಿದ ಜನರು| 2 ತಿಂಗಳ ಹಸುಳೆ ಎದೆಗೊತ್ತಿ ಈಜಿದ ಬಾಣಂತಿ ಬಚಾವ್

Woman with 2 month old baby swims to safety pregnant woman rescued in Attappady
Author
Bangalore, First Published Aug 12, 2019, 11:03 AM IST

ಪುತ್ತುಮಾಲಾ[ಆ.12]: ಮಹಿಳೆಯೊಬ್ಬಳು ತನ್ನ 2 ತಿಂಗಳ ಮಗುವನ್ನು ಎದೆಗೆ ಕಟ್ಟಿಕೊಂಡು ಈಜಿಕೊಂಡೇ ಪ್ರವಾಹವನ್ನು ದಾಟಿ ಜೀವ ಉಳಿಸಿಕೊಂಡ ಸಾಹಸಮಯ ಘಟನೆ ಕೇರಳದಲ್ಲಿ ನಡೆದಿದೆ. ವಯನಾಡಿನಲ್ಲಿ ಉಂಟಾದ ಭೂ ಕುಸಿತದಿಂದ ಪಾರಾಗುವ ಸಲುವಾಗಿ 25 ವರ್ಷದ ಪ್ರಜಿತಾ ಎಂಬಾಕೆ ಈ ಸಾಹಸ ಮಾಡಿದ್ದಾಳೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಆಗಿದ್ದೇನು?:

ವಯನಾಡಿನ ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಪುತ್ತುಮಾಲಾ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿತ್ತು. ಮುಂದಾಗಬಹುದಾದ ಅನಾಹುತವನ್ನು ಊಹಿಸಿ ಪ್ರಜಿತಾಳ ಕುಟುಂಬ ಮನೆಯಿಂದ ಹೊರಗೆ ಓಡಿ ಬಂದು ಸುರಕ್ಷಿತ ಪ್ರದೇಶಕ್ಕೆ ತೆರಳಲು ಧಾವಿಸಿತ್ತು. ಈ ವೇಳೆ ಪ್ರಜಿತಾ ಪುಟ್ಟ ಮಗುವನ್ನು ಎದೆಗೆ ಕಟ್ಟಿಕೊಂಡೆ ತುಂಬಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲಿ ಈಜಿ ದಡ ಸೇರಿದ್ದಾಳೆ.

ಸಿಸೆರಿಯನ್ ಮೂಲಕ 2 ತಿಂಗಳ ಹಿಂದಷ್ಟೇ ಮಗುವನ್ನು ಹೆತ್ತಿದ್ದ ಆಕೆ ಇಂಥ ಸಂಕಷ್ಟದಲ್ಲೂ ನಡೆಸಿದ ಸಾಹಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ

Follow Us:
Download App:
  • android
  • ios