ನ್ಯೂಯಾರ್ಕ್(ಡಿ.07): ಹೊಟೇಲ್‌ನ ಕೊಠಡಿಯಲ್ಲಿ ತಾನು ನಗ್ನವಾಗಿ ಸ್ನಾನ ಮಾಡುತ್ತಿದ್ದುದ್ದನ್ನು ರಹಸ್ಯ ಕ್ಯಾಮೆರಾ ಮೂಲಕ ಸೆರೆ ಹಿಡಿದು ಈ ವಿಡಿಯೋವನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ ಹೋಟೆಲ್‌ ವಿರುದ್ಧ ಕೆಂಡಾಮಂಡಲವಾಗಿರುವ ಮಹಿಳೆಯೊಬ್ಬರು, ಭರ್ಜರಿ 700 ಕೋಟಿ ರು. ಪರಿಹಾರ ಕೋರಿದ್ದಾರೆ.

ಮಹಿಳೆಯೊಬ್ಬರು 2015ರಲ್ಲಿ ಅಮೆರಿಕದ ಶಿಕಾಗೋದ ಪ್ರಖ್ಯಾತ ಹಿಲ್ಟನ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಹೋಟೆಲ್‌ ಸಿಬ್ಬಂದಿ, ಮಹಿಳೆ ನಗ್ನವಾಗಿ ಸ್ನಾನ ಮಾಡುವ ದೃಶ್ಯವನ್ನು ರಹಸ್ಯ ಕೆಮೆರಾ ಮೂಲಕ ಸೆರೆಹಿಡಿದು ಅದನ್ನು ಅಶ್ಲೀಲ ದೃಶ್ಯಗಳನ್ನು ಹಂಚಿಕೊಳ್ಳುವ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದರು. ಇತ್ತೀಚೆಗೆ ಮಹಿಳೆಯ ಸ್ನೇಹಿತರೊಬ್ಬರ ಆ ವಿಡಿಯೋ ನೋಡಿ, ಆ ಬಗ್ಗೆ ಮಹಿಳೆಯ ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆ, ಹೋಟೆಲ್‌ನಿಂದ 700 ಕೋಟಿ ರು. ಪರಿಹಾರ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ.