ಮಕ್ಕಳಿರಲವ್ವ ಮನೆ ತುಂಬಾ ಎಂಬ ಗಾದೆ ಮಾತಿದೆ. ಆದರೆ, ಬ್ರಿಟನ್‌ ದಂಪತಿಯೊಂದು ಮಕ್ಕಳನ್ನು ಹೆರುವುದರಲ್ಲೂ ದಾಖಲೆ ನಿರ್ಮಿಸಿದ್ದಾರೆ.

ಸ್ಯೂ ಮತ್ತು ನೋಯೆಲ್‌ ರೆಡ್ಫೋರ್ಡ್‌ ದಂಪತಿ ತಮ್ಮ 28 ವರ್ಷಗಳ ದಾಂಪತ್ಯ ಜೀವನದಲ್ಲಿ 21 ಮಕ್ಕಳನ್ನು ಹೆತ್ತಿದ್ದಾರೆ. ಈ ಮೂಲಕ ಬ್ರಿಟನ್‌ನಲ್ಲೇ ಅತಿದೊಡ್ಡ ಕುಟುಂಬ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ಸ್ಯೂ13ನೇ ವರ್ಷದಲ್ಲೇ ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಆಗ ನೊಯೆಲ್‌ಗೆ 18 ವರ್ಷ ವಯಸ್ಸಾಗಿತ್ತಂತೆ.