ಹುಬ್ಬಳ್ಳಿ (ಸೆ.17): ಮಹಿಳೆಯೊಬ್ಬಳು ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಹುಬ್ಬಳ್ಳಿಯ ಗುರುನಾಥ ನಗರದಲ್ಲಿ ನಡೆದಿದೆ.

ಗೋಡ್ಕೆ ಪ್ಲಾಟ್ ನಿವಾಸಿ ಪರ್ವೀನಾಬಾನು ನಾಯಕ್, ಆಟೋದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಪರ್ವೀನಾಬಾನು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಆಟೋದಲ್ಲಿ ಹಳೇಹುಬ್ಬಳ್ಳಿ ಪಾಲಿಕೆ ಆಸ್ಪತ್ರೆಗೆ ಕರೆ ತರಲಾಗುತ್ತಿತ್ತು.

ಈ ವೇಳೆ ಮಾರ್ಗಮಧ್ಯದಲ್ಲಿ ಆಟೋದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.