ಯಾಸ್ಮೀನ್ ಅಹಮದ್ ಜೈಲು ಸೇರಿದ ಮಹಿಳೆ. ಕೇರಳದಲ್ಲಿ ಐಎಸ್ ಸಂಬಂಧಿತ ಪ್ರಕರಣಗಳಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣವಾಗಿದೆ.

ತಿರುವನಂತಪುರ(ಮಾ.24): ಉತ್ತರ ಕೇರಳದ 15 ಯುವಕರನ್ನು ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್'ಗೆ ಸೇರಲು ಸಹಾಯ ಮಾಡಿದ ಆರೋಪಕ್ಕಾಗಿ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯ ಮಹಿಳೆಯೊಬ್ಬರಿಗೆ 7 ವರ್ಷ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿದೆ.

ಯಾಸ್ಮೀನ್ ಅಹಮದ್ ಜೈಲು ಸೇರಿದ ಮಹಿಳೆ. ಕೇರಳದಲ್ಲಿ ಐಎಸ್ ಸಂಬಂಧಿತ ಪ್ರಕರಣಗಳಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣವಾಗಿದೆ. 2016ರಲ್ಲಿ ತಮ್ಮ ಮಗನ ಜೊತೆ ದೇಶ ಬಿಡುವ ಸಂದರ್ಭದಲ್ಲಿ ಈಕೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ಮುನ್ನ52 ಆಪಾದಿತ ಹಾಗೂ ಒಂದು ಪ್ರತಿವಾದಿ ಹೇಳಿಕೆಗಳ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಪಡೆಯಲಾಗಿತ್ತು. ಇದರಿಂದ ಈಕೆ ದೇಶದ ವಿರುದ್ಧ ಯುದ್ಧ ಸಾರುವ ಅಪರಾಧಿ ಎಂದು ತಿಳಿದುಬಂದಿದೆ. ಈಕೆ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಕಾಣೆಯಾದ ಕೇರಳ ಯುವಕನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಳು