ತನ್ನ ಸ್ನೇಹಿತೆಯ ಮೇಲೇ ಅತ್ಯಾಚಾರ ಎಸಗಲು ಓರ್ವ ವ್ಯಕ್ತಿ ಮತ್ತು ಆತನ ಪತ್ನಿಗೆ ಸಹಕರಿಸಿದ ಮಹಿಳೆಯೊಬ್ಬಳಿಗೆ ಉತ್ತರ ಪ್ರದೇಶದ ಮುಜಫ್ಫರ್‌ಪುರ ತ್ವರಿತ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲಖನೌ (ಡಿ.23):ತನ್ನ ಸ್ನೇಹಿತೆಯ ಮೇಲೇ ಅತ್ಯಾಚಾರ ಎಸಗಲು ಓರ್ವ ವ್ಯಕ್ತಿ ಮತ್ತು ಆತನ ಪತ್ನಿಗೆ ಸಹಕರಿಸಿದ ಮಹಿಳೆಯೊಬ್ಬಳಿಗೆ ಉತ್ತರ ಪ್ರದೇಶದ ಮುಜಫ್ಫರ್ಪುರ ತ್ವರಿತ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2003, ಜೂ. 3ರಂದು 22ರ ಹರೆಯದ ಯುವತಿಯೊಬ್ಬಳ ಅತ್ಯಾಚಾರಕ್ಕೆ ಉಗರ್ ಸೈನ್ ಮತ್ತು ಆತನ ಪತ್ನಿಗೆ ರೀಟಾ ಕುಮಾರಿ ಎಂಬಾಕೆ ಸಹಾಯ ಮಾಡಿದ್ದಳು.
ಈ ಪ್ರಕರಣದಲ್ಲಿ ಇದೀಗ ಶಿಕ್ಷೆ ಪ್ರಕಟಿಸಲಾಗಿದೆ. ಕೇಸಲ್ಲಿ ಉಗರ್ ಸೈನ್ ಮತ್ತು ಆತನ ಪತ್ನಿ ದೋಷಿಗಳು ಎಂಬುದು 2006ರಲ್ಲೇ ತೀರ್ಪು ಹೊರಬಿದ್ದಿತ್ತು.
